ADVERTISEMENT

3 ವರ್ಷದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಸಚಿವ ಎಚ್‌.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 15:58 IST
Last Updated 22 ಏಪ್ರಿಲ್ 2025, 15:58 IST
ಸಚಿವ ಹೆಚ್.ಸಿ.ಮಹದೇವಪ್ಪ ಅವರು ಮನವಿ ಸ್ವೀಕರಿಸಿದರು. ವೈಟ್ ಫಿಲ್ಢ್ ಮುರುಗೇಶ್, ಕನ್ನೆಲ್ಲಿ ಕೃಷ್ಣಪ್ಪ, ಮರಿಯಪ್ಪ ಇದ್ದರು
ಸಚಿವ ಹೆಚ್.ಸಿ.ಮಹದೇವಪ್ಪ ಅವರು ಮನವಿ ಸ್ವೀಕರಿಸಿದರು. ವೈಟ್ ಫಿಲ್ಢ್ ಮುರುಗೇಶ್, ಕನ್ನೆಲ್ಲಿ ಕೃಷ್ಣಪ್ಪ, ಮರಿಯಪ್ಪ ಇದ್ದರು   

ಕೆ.ಆರ್.ಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ 200 ಮೀಟರ್ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಜಾ ಭೀಮ್ ಸಂಘದ ಅಧ್ಯಕ್ಷ ಅಧ್ಯಕ್ಷ ವೈಟ್‌ಫೀಲ್ಡ್‌ ಮುರುಗೇಶ್ ನೇತೃತ್ವದಲ್ಲಿ ಬೀದರ್‌ನಿಂದ ಬೆಂಗಳೂರಿನವರೆಗೆ ನಡೆದ ಪಾದಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮಾರ್ಚ್ 6ರಂದು ಬೀದರ್‌ನಿಂದ ಪಾದಯಾತ್ರೆ ಆರಂಭಗೊಂಡಿತ್ತು. ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಗಡಿ ಜಿಲ್ಲೆಗಳ ಮೂಲಕ ಬೆಂಗಳೂರಿನವರೆಗೆ ಸುಮಾರು 1035 ಕಿ.ಮೀ. ದೂರವನ್ನು 45 ದಿನದಲ್ಲಿ ಕ್ರಮಿಸಿ, ಪೂರ್ಣಗೊಂಡಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವರು, ಸರ್ಕಾರದ ವತಿಯಿಂದ ಮೂರು ವರ್ಷದ ಒಳಗೆ ಅತಿ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಪ್ರಜಾ ಭೀಮ್ ಸಂಘದ ಅಧ್ಯಕ್ಷ ವೈಟ್‌ಫೀಲ್ಡ್ ಮುರುಗೇಶ್ ಮಾತನಾಡಿ, ‘ನಮ್ಮ ಹೋರಾಟಕ್ಕೆ ಸ್ಪಂದಿಸಿದ ಸಮಾಜ ಕಲ್ಯಾಣ ಸಚಿವರಿಗೆ, ಸರ್ಕಾರಕ್ಕೆ ಧನ್ಯವಾದ ಅರ್ಪಿಸುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.