ADVERTISEMENT

ಹಣ ದುಪ್ಪಟ್ಟು ,ವಂಚನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:01 IST
Last Updated 24 ನವೆಂಬರ್ 2020, 21:01 IST

ಬೆಂಗಳೂರು: ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ನೀಡುವುದಾಗಿ ಆಮಿಷವೊಡ್ಡಿದ್ದ ವ್ಯಕ್ತಿಯೊಬ್ಬ ನಗರದ ನಿವಾಸಿಯೊಬ್ಬರಿಂದ ₹ 3.18 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾರ್ಖಾನೆಯೊಂದರ ಉದ್ಯಮಿ ಶಿವಕುಮಾರ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ವಿಶ್ವನಾಥ್, ಅಭಿಷೇಕ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಶಿವಕುಮಾರ್ ಅವರಿಗೆ ಕರೆ ಮಾಡಿದ್ದ ವಿಶ್ವನಾಥ್ ಮತ್ತು ಅಭಿಷೇಕ್ ಎಂಬುವರು, ‘ನಾವು ಜಿರೋದಾ ಟ್ರೇಡಿಂಗ್ ಕಂಪನಿ ಪ್ರತಿನಿಧಿಗಳು. ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ 20 ದಿನದೊಳಗೆ ಹಣ ದ್ವಿಗುಣಮಾಡಿಕೊಡುವುದಾಗಿ ಹೇಳಿದ್ದರು. ಅವರ ಮಾತು ನಂಬಿದ್ದ ಶಿವಕುಮಾರ್, ಆನ್‌ಲೈನ್ ಮೂಲಕ ಹಣ ಜಮೆ ಮಾಡಿದ್ದರು.’

ADVERTISEMENT

‘ಹೂಡಿಕೆ ನಂತರ ಆರೋಪಿಗಳು, ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಅವರಿಬ್ಬರ ಬಗ್ಗೆ ಮಾಹಿತಿ ಕಲೆಹಾಕಿದಾಗ, ಜಿರೋದಾ ಟ್ರೇಡಿಂಗ್ ಕಂಪನಿ ಎಂಬುದೇ ಇಲ್ಲವೆಂಬುದು ಗೊತ್ತಾಗಿದೆ. ಬಳಿಕ ಶಿವಕುಮಾರ್ ದೂರು ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.