ADVERTISEMENT

ಬೆಂಗಳೂರು: ತ್ಯಾಜ್ಯ ನಿರ್ವಹಣೆಗಾಗಿ ‘ಅಮೃತ’ ಶಕ್ತಿ

ಕಸದಿಂದ ನಲುಗಿರುವ ಹಳ್ಳಿಗಳ ಅಭಿವೃದ್ಧಿಗೆ ₹85 ಕೋಟಿ; ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್‌

Published 6 ಅಕ್ಟೋಬರ್ 2022, 12:31 IST
Last Updated 6 ಅಕ್ಟೋಬರ್ 2022, 12:31 IST
ಮಿಟ್ಟಗನಹಳ್ಳಿ ಲ್ಯಾಂಡ್‌ಫಿಲ್‌
ಮಿಟ್ಟಗನಹಳ್ಳಿ ಲ್ಯಾಂಡ್‌ಫಿಲ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಸದಿಂದ ಸಾಕಷ್ಟು ನಲುಗುತ್ತಿರುವುದು ನಗರದ ಹೊರವಲಯದಲ್ಲಿರುವ ಹಲವು ಹಳ್ಳಿಗಳು. ಈ ಗ್ರಾಮಗಳ ‘ವಿಷ’ವನ್ನು ತೊರೆಯಲು ಇದೀಗ ‘ಅಮೃತ‌’ದ ಶಕ್ತಿ ಬಂದಿದೆ. ₹85 ಕೋಟಿ ವೆಚ್ಚದಲ್ಲಿ ಆ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಾಗಲಿವೆ.

ನಗರದಲ್ಲಿ ಉತ್ಪತ್ತಿಯಾಗುವ 6 ಸಾವಿರಕ್ಕೂ ಹೆಚ್ಚು ಟನ್‌ ತ್ಯಾಜ್ಯದ ಸಂಸ್ಕರಣೆ ಘಟಕ, ಲ್ಯಾಂಡ್‌ಫಿಲ್‌ಗಳಿಗೆ ಹೋಗುತ್ತದೆ. ಬಹುತೇಕ ಇವೆಲ್ಲವೂ ಹೊರಭಾಗದ ಹಳ್ಳಿಗಳ ಹತ್ತಿರದಲ್ಲೇ ಇವೆ. ಇದರಿಂದ ಗ್ರಾಮಗಳಲ್ಲಿ ಸಾಕಷ್ಟು ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಅಲ್ಲದೆ, ಹಳ್ಳಿಗಳ ರಸ್ತೆಗಳೂ ಹಾಳಾಗಿಹೋಗಿದ್ದವು. ಈ ಬಗ್ಗೆ ಹೋರಾಟಗಳೂ ನಡೆದಿದ್ದವು.

ಇದೀಗ ಅಮೃತ ನಗರೋತ್ಥಾನ ಯೋಜನೆಯಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಅಥವಾ ಲ್ಯಾಂಡ್‌ಫಿಲ್‌ಗಳ ಸುತ್ತಲಿರುವ ಹಳ್ಳಿಗಳನ್ನು 15 ಹಳ್ಳಿಗಳ ಸಂಪರ್ಕ ರಸ್ತೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ₹85 ಕೋಟಿಯ ಅನುಮೋದನೆ ದೊರೆತಿದೆ.

ADVERTISEMENT

ಸುವಿಧಾ: ಪೌರಕಾರ್ಮಿಕರಿಗಾಗಿ 221 ಸುವಿಧಾ ಕ್ಯಾಬಿನ್‌ಗಳಿಗೆ ಅನುಮೋದನೆ ದೊರೆತಿದ್ದು, 84 ಆರಂಭವಾಗಿವೆ. 225 ಸುವಿಧಾ ಕ್ಯಾಬಿನ್‌ಗಳನ್ನು ಬಿಬಿಎಂಪಿ 2ನೇ ಹಂತದಲ್ಲಿ ನಗರೋತ್ಥಾನ ಅನು ದಾನದಲ್ಲಿ ನಿರ್ಮಾಣ ಮಾಡಲಿದೆ. ಪೌರಕಾರ್ಮಿಕರು ಪ್ರತಿದಿನ ಕೆಲಸ ಆರಂಭಿಸುವ ಸ್ಥಳಗಳಲ್ಲಿ ಈ ಕ್ಯಾಬಿನ್‌ ಸ್ಥಾಪಿಸಲಾಗುತ್ತದೆ. ಶೌಚಾಲಯ, ಬಟ್ಟೆ ಬದಲಿಸಲು ಜಾಗ, ಸಾಮಗ್ರಿಗಳನ್ನು ಇರಿಸಿಕೊಳ್ಳುವ ಸೌಲಭ್ಯ ಇದರಲ್ಲಿರಲಿದೆ.

ಸ್ಯಾನಿಟರಿ ತ್ಯಾಜ್ಯ: ಸ್ಯಾನಿಟರಿ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಈಗ 4 ಸಂಸ್ಥೆಗಳಿಗೆ ನೀಡಿ, ಅವುಗಳನ್ನು ಸುಡಲು ಹಣವನ್ನೂ ನೀಡಲಾಗುತ್ತಿದೆ. ಈಗ ಬಿಬಿಎಂಪಿ ವತಿಯಿಂದಲೇ 2 ಘಟಕ ನಿರ್ಮಿಸಿ ಆ ತ್ಯಾಜ್ಯ ನಿರ್ವಹಣೆ ಮಾಡುವ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್‌: ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ 600 ಎಂಟಿಪಿಡಿ ತ್ಯಾಜ್ಯವನ್ನು 11 ಮೆಗಾವ್ಯಾಟ್‌ ವಿದ್ಯುತ್‌ ಅನ್ನಾಗಿ ಪ್ರತಿದಿನವೂ ಉತ್ಪಾದಿಸಲಾಗುತ್ತದೆ. ಇದಕ್ಕಾಗಿ ಬಿಬಿಎಂಪಿ ₹55 ಕೋಟಿಯನ್ನು ಕೆಪಿಟಿಸಿಎಲ್‌ಗೆ ಪಾವತಿಸುತ್ತಿದೆ.

ಹಳ್ಳಿಗಳ ಅಭಿವೃದ್ಧಿ

‘ತ್ಯಾಜ್ಯ ಸಂಸ್ಕರಣೆ ಹಾಗೂ ಲ್ಯಾಂಡ್‌ಫಿಲ್‌ ಪ್ರದೇಶಗಳ ಸುತ್ತಲಿನ ಗ್ರಾಮಗಳ ಜನರು ರಸ್ತೆ ಮಾಡಿಕೊಡಬೇಕು, ಆಸ್ಪತ್ರೆ ಕಟ್ಟಡ ನಿರ್ಮಿಸಿಕೊಡಿ, ಸ್ಪ್ರೇ ಮಾಡಿಕೊಡಿ ಎಂಬೆಲ್ಲ ಬೇಡಿಕೆಗಳನ್ನು ಇಟ್ಟಿದ್ದರು. ಹಿಂದೆಯೂ ಸಾಕಷ್ಟು ಇಂತಹ ಕೆಲಸಗಳನ್ನು ಮಾಡಿಕೊಟ್ಟಿದ್ದೇವೆ. ಇದೀಗ ಅಮೃತ್‌ ನಗರೋತ್ಥಾನದಲ್ಲಿ ಹಳ್ಳಿಯವರ ಬೇಡಿಕೆಯನ್ನು ಸಮಗ್ರವಾಗಿ ಈಡೇರಿಸುವ ಉದ್ದೇಶ ಹೊಂದಲಾಗಿದೆ’ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

ಪ್ರಾಣಿ ಆಹಾರ ಉತ್ಪಾದನೆ

ಪ್ರಾಣಿಗಳ ವರ್ಜ್ಯ, ತ್ಯಾಜ್ಯವನ್ನು ಸಂಗ್ರಹಿಸಿ, ಅದರಿಂದ ಪ್ರಾಣಿಗಳಿಗೆ ಆಹಾರವನ್ನು ಉತ್ಪಾದಿಸುವಘಟಕವನ್ನು ಸ್ಥಾಪಿಸಲಾಗುತ್ತಿದೆ. ಬಿಬಿಎಂಪಿ ಜಾಗ ಮತ್ತು ಸೌಲಭ್ಯವನ್ನು ನೀಡಲಿದ್ದು, ಖಾಸಗಿ ಸಂಸ್ಥೆಯವರು ನಿರ್ವಹಣೆ ಮಾಡಿ, ನಾಯಿ ಸೇರಿದಂತೆ ಇತರೆ ಪ್ರಾಣಿಗಳಿಗೆ ಆಹಾರ ಉತ್ಪಾದಿಸಿ ಮಾರಾಟ ಮಾಡಲಿದ್ದಾರೆ. ಬಿಬಿಎಂಪಿ ಇಂತಿಷ್ಟು ಎಂದು ಹಣವನ್ನೂ ನೀಡಲಿದ್ದಾರೆ.

ಘನತ್ಯಾಜ್ಯ ನಿರ್ವಹಣೆಗೆ ಕ್ರಿಯಾಯೋಜನೆಗಳು

ಕನ್ನಹಳ್ಳಿ, ಚಿಕ್ಕನಾಗಮಂಗಲ, ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣೆ ಘಟಕ ಹಾಗೂ ಇತರೆ ಲ್ಯಾಂಡ್‌ಫಿಲ್‌ ಪ್ರದೇಶಗಳಿಗೆ ರಸ್ತೆಗಳ ನಿರ್ಮಾಣ;₹25 ಕೋಟಿ

ಪ್ರಾಣಿ ತ್ಯಾಜ್ಯ ಸಂಸ್ಕರಣೆಯಿಂದ ಪ್ರಾಣಿ ಆಹಾರ ಉತ್ಪಾದನೆ ಘಟಕ ಸ್ಥಾಪನೆ;₹10 ಕೋಟಿ

ಎನ್‌ಜಿಟಿ ಸಮಿತಿ ನಿರ್ದೇಶನದಂತೆ ನಾಲ್ಕು ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ಸೋರಿಕೆ ಸಂಸ್ಕರಣ (20 ಕೆಎಲ್‌ಡಿ) ಘಟಕಗಳ ಸ್ಥಾ‍ಪನೆ;₹10 ಕೋಟಿ

ಬಿಡದಿಯಲ್ಲಿ 11 ಮೆಗಾವ್ಯಾಟ್‌ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕ;₹55 ಕೋಟಿ

ಹೊಸ ವೈಜ್ಞಾನಿಕ ಲ್ಯಾಂಡ್‌ಫಿಲ್‌ ಪ್ರದೇಶಗಳ ಸ್ಥಾಪನೆ;₹40 ಕೋಟಿ

ಪೌರಕಾರ್ಮಿಕರಿಗಾಗಿ 225 ಸುವಿಧಾ ಕ್ಯಾಬಿನ್‌;₹20 ಕೋಟಿ

ಘನತ್ಯಾಜ್ಯ ನಿರ್ವಹಣೆ ಪ್ರದೇಶಗಳಿಗೆ ಫೆನ್ಸಿಂಗ್‌;₹5 ಕೋಟಿ

ಸಫಾಯಿ ಕರ್ಮಚಾರಿಗಳಿಗೆ ಸುರಕ್ಷಿತ ಸಾಧನ, ಸಮವಸ್ತ್ರ;₹15 ಕೋಟಿ

ರಸ್ತೆ/ಪಾದಚಾರಿ ಮಾರ್ಗಗಳನ್ನು ಗುಡಿಸಲು ಉಪಕರಣಗಳು;₹10 ಕೋಟಿ

ಸ್ಯಾನಿಟರಿ ತ್ಯಾಜ್ಯಗಳ ಸಂಸ್ಕರಣ ಘಟಕ;₹10 ಕೋಟಿ

ಆರ್‌.ಆರ್‌. ನಗರ ವಿಧಾನಸಭೆ ಕ್ಷೇತ್ರದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಮೂಲಸೌಕರ್ಯ;₹15 ಕೋಟಿ

ಮಿಟ್ಟಗನಹಳ್ಳಿ/ ಕನ್ನೂರು ಲ್ಯಾಂಡ್‌ಫಿಲ್‌ ಪ್ರದೇಶಗಳ ಸುತ್ತ ಹಳ್ಳಿಗಳ ಅಭಿವೃದ್ಧಿ;₹20 ಕೋಟಿ

ಬೆಳ್ಳಹಳ್ಳಿ ಮತ್ತು ಬಾಗಲೂರು ಲ್ಯಾಂಡ್‌ ಫಿಲ್‌ ಪ್ರದೇಶಗಳ ಸುತ್ತ ಹಳ್ಳಿಗಳ ಅಭಿವೃದ್ಧಿ ಕಾಮಗಾರಿ;₹20 ಕೋಟಿ

ಬಿಬಿಎಂಪಿಯ 6 ತ್ಯಾಜ್ಯ ಸಂಸ್ಕರಣ ಘಟಕಗಳ ಸುತ್ತಮುತ್ತಲಿನ ಹಳ್ಳಿಗಳ (ಕನ್ನಹಳ್ಳಿ, ಕೆಸಿಡಿಸಿ, ಚಿಕ್ಕನಾಗಮಂಗಲ, ದೊಡ್ಡಬಿದರಕಲ್ಲು, ಸುಬ್ಬರಾಯನಪಾಳ್ಯ, ಸೀಗೇಹಳ್ಳಿ, ಲಿಂಗಧೀರಹಳ್ಳಿ) ಅಭಿವೃದ್ಧಿ ಕಾಮಗಾರಿ;₹10 ಕೋಟಿ

ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣೆ ಘಟಕದ ಸುತ್ತಲಿನ ಹಳ್ಳಿಗಳ ಅಭಿವೃದ್ಧಿ ಕಾಮಗಾರಿ;₹10 ಕೋಟಿ

ಒಟ್ಟು;₹275 ಕೋಟಿ

ಪ್ರಾಣಿ ಆಹಾರ ಉತ್ಪಾದನೆ

ಪ್ರಾಣಿಗಳ ವರ್ಜ್ಯ, ತ್ಯಾಜ್ಯವನ್ನು ಸಂಗ್ರಹಿಸಿ, ಅದರಿಂದ ಪ್ರಾಣಿಗಳಿಗೆ ಆಹಾರವನ್ನು ಉತ್ಪಾದಿಸುವಘಟಕವನ್ನು ಸ್ಥಾಪಿಸಲಾಗುತ್ತಿದೆ. ಬಿಬಿಎಂಪಿ ಜಾಗ ಮತ್ತು ಸೌಲಭ್ಯವನ್ನು ನೀಡಲಿದ್ದು, ಖಾಸಗಿ ಸಂಸ್ಥೆಯವರು ನಿರ್ವಹಣೆ ಮಾಡಿ, ನಾಯಿ ಸೇರಿದಂತೆ ಇತರೆ ಪ್ರಾಣಿಗಳಿಗೆ ಆಹಾರ ಉತ್ಪಾದಿಸಿ ಮಾರಾಟ ಮಾಡಲಿದ್ದಾರೆ. ಬಿಬಿಎಂಪಿ ಇಂತಿಷ್ಟು ಎಂದು ಹಣವನ್ನೂ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.