ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಬಿಎಂಪಿಯ ದಾಸರಹಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಡಿ ನಡೆದಿರುವ ₹25 ಕೋಟಿ ವೆಚ್ಚದ ಕಾಮಗಾರಿಯ ಬಿಲ್ ಪಾವತಿಗೆ ತಡೆ ನೀಡಲಾಗಿದ್ದು, ತನಿಖೆ ನಡೆಸಿ ವರದ ಸಲ್ಲಿಸಲು ಸೂಚಿಸಲಾಗಿದೆ.
‘ಪ್ರಜಾವಾಣಿ’ಯಲ್ಲಿ ಏಪ್ರಿಲ್ 23ರಂದು ಪ್ರಕಟವಾಗಿದ್ದ ‘₹25 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಅಕ್ರಮ?’ ಶೀರ್ಷಿಕೆಯ ವರದಿಯನ್ನು ಪ್ರಸ್ತಾಪಿಸಿರುವ ದಾಸರಹಳ್ಳಿ ವಲಯ ಆಯುಕ್ತರು, ಈ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಮಗಾರಿಯಲ್ಲಿ ಅಕ್ರಮವಾಗಿರುವ ಬಿ.ಆರ್. ಬಿಲ್‌ಗಳನ್ನು ತಡೆಹಿಡಿದು, ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಪಾರದರ್ಶಕವಾಗಿ ನಿಯಮಾನುಸಾರ ಪರಿಶೀಲನೆ ಮಾಡಿ ವಾಸ್ತವ ವರದಿ ಸಲ್ಲಿಸಲು ದಾಸರಹಳ್ಳಿ ವಲಯದ ಮುಖ್ಯ ಆಯುಕ್ತರಿಗೆ ಏಪ್ರಿಲ್ 25ರಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.