ADVERTISEMENT

‘ವಿವೇಕ ದೀಪಿನೀ’ ಕಾರ್ಯಕ್ರಮಕ್ಕೆ ಶಾ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:33 IST
Last Updated 9 ಜನವರಿ 2020, 19:33 IST

ಬೆಂಗಳೂರು: ವೇದಾಂತ ಭಾರತಿ ಇದೇ 18 ರಂದು ಹಮ್ಮಿಕೊಂಡಿರುವ ‘ವಿವೇಕ ದೀಪಿನೀ’ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಭಾಗವಹಿಸಲಿದ್ದಾರೆ.

ಅಂದು ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಅರಮನೆ ಆವರಣದ ಶ್ರೀಕೃಷ್ಣ ವಿಹಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನಮಾಲಿಕೆಯ ಸಂಗ್ರಹವಾಗಿರುವ ವಿವೇಕ ದೀಪೀನಿಯನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಶಾಲ ಮಕ್ಕಳಿಂದ ಸ್ತೋತ್ರ ಸಮರ್ಪಣೆ ನಡೆಯುತ್ತದೆ ಎಂದು ವೇದಾಂತ ಭಾರತಿ ತಿಳಿಸಿದೆ.

ಯಡತೊರೆ ಯೋಗಾನಂದೇಶ್ವರ ಸ್ವರಸ್ವತಿ ಮಠದ ಶಂಕರ ಭಾರತೀ ಸ್ವಾಮೀಜಿ ಅನುಗ್ರಹ ಭಾಷಣ ಮಾಡಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್‌, ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಭಾಗವಹಿಸುವರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.