ADVERTISEMENT

ಅಂಗನವಾಡಿ ಕೇಂದ್ರ ಹೆಚ್ಚಿಸಿ: ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:50 IST
Last Updated 5 ಜುಲೈ 2022, 19:50 IST

ಬೆಂಗಳೂರು: ‘ನಗರ ಪ್ರದೇಶದ ಕೊಳೆಗೇರಿ, ಎಸ್ಸಿ, ಎಸ್ಟಿ ಸಮುದಾ ಯಗಳ ವಸತಿ ಪ್ರದೇಶ, ಅಲ್ಪಸಂ ಖ್ಯಾತರು, ಬುಡ ಕಟ್ಟು-ಆದಿವಾಸಿ ಸಮುದಾಯ ವಾಸವಾಗಿರುವ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಒತ್ತು ನೀಡಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ಅಥಣಿಯ ‘ವಿಮೋಚನಾ ಸಂಘ’ದ ಅಧ್ಯಕ್ಷ ಬಿ.ಎಲ್. ಪಾಟೀಲ ಅವರು 2011ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ನೇತೃತ್ವದ ಸಮಿತಿ 2012ರಲ್ಲಿ ಮಾಡಿದ್ದ ಶಿಫಾರಸುಗಳನ್ನು ಆಧರಿಸಿ, ನ್ಯಾಯಮೂರ್ತಿ ಎ.ಎನ್. ಗೋಪಾಲಗೌಡ ನೇತೃತ್ವದ ಸಮಿತಿ ಈಗ ವರದಿ ಸಲ್ಲಿಸಿದೆ.

ADVERTISEMENT

ಹೈಕೋರ್ಟ್ ನಿರ್ದೇಶನ ದಂತೆ 2021ರಲ್ಲಿ ಈ ಸಮಿತಿ ಯನ್ನು ರಚಿಸಲಾಗಿತ್ತು.ಒಟ್ಟು 12 ಸಭೆ ನಡೆಸಿರುವ ಸಮಿತಿ ಎಲ್ಲಾ ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಿ ಆರಕ್ಕೂ ಹೆಚ್ಚು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.