ರಾಜರಾಜೇಶ್ವರಿ ನಗರ: ಬೆಂಗಳೂರು ಮತ್ತು ಮೈಸೂರು ವಿಭಾಗದ ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಡಿ. ಹನುಮಂತಯ್ಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಚ್. ಎನ್. ಶ್ರೀನಿವಾಸ ಗೌಡ (ಕುಣಿಗಲ್), ಕಾರ್ಯದರ್ಶಿಯಾಗಿ ಹೇಮಂತ್ ಕುಮಾರ್, ಬೆಂಗಳೂರು ದಕ್ಷಿಣ ನಿರ್ದೇಶಕರಾಗಿ ಬಿ. ಶಿವಣ್ಣ (ಕುಣಿಗಲ್), ಎಚ್. ಬಿ. ಚಂದ್ರು (ಚನ್ನಪಟ್ಟಣ), ಪಿ. ಮಹದೇವಯ್ಯ (ಮಳವಳ್ಳಿ), ಎಚ್. ಟಿ. ಮಂಜುನಾಥ್ (ದೊಡ್ಡಬಳ್ಳಾಪುರ), ಜಿ.ವಿ. ನಾರಾಯಣಸ್ವಾಮಿ (ಬೆಂಗಳೂರು ದಕ್ಷಿಣ), ಕೆ.ಚಂದ್ರಯ್ಯ (ಮಾಗಡಿ), ರಾಮಕೃಷ್ಣಯ್ಯ (ಚನ್ನಪಟ್ಟಣ), ಹನುಮಂತೇಗೌಡ, ಟಿ. ಮಂಜುನಾಥ್ (ಮಾಗಡಿ), ಎಚ್.ವಿ. ಹನುಮಂತರಾಯಪ್ಪ (ಚಿತ್ರದುರ್ಗ), ಜಿ. ಕೆಂಪೇಗೌಡ (ದೊಡ್ಡಬಳ್ಳಾಪುರ), ಪಿ. ಚಂದ್ರೇಗೌಡ (ರಾಮನಗರ), ಕುಮಾರ್ (ಮಾಗಡಿ), ಚಿನ್ನಸ್ವಾಮಿ (ಕನಕಪುರ), ಪುರುಷೋತ್ತಮ್ (ಮಾಗಡಿ), ಹೇಮಾ ಮತ್ತು ಲೀಲಾವತಿ (ಬೆಂಗಳೂರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ. ಹನುಮಂತಯ್ಯ ಮಾತನಾಡಿ, ‘ಬೆಂಗಳೂರು ಮತ್ತು ಮೈಸೂರು ವಿಭಾಗದ ಅಡಿಕೆ ಬೆಳೆಯುವ ರೈತರ ಸಂಕಷ್ಟಗಳಿಗೆ ಸ್ಪಂದಿಸಲಾಗುವುದು. ಅಡಿಕೆ ಸಂಸ್ಕರಣೆ, ಉತ್ತೇಜನ ನೀಡಲು ಮತ್ತು ಸದಸ್ಯರ ಹಿತವನ್ನು ಕಾಪಾಡಲು ಅಡಿಕೆ ಬೆಳೆಗಾರರ ಸಂಘವನ್ನು ಸ್ಥಾಪಿಸಲಾಗಿದೆ. ಸದಸ್ಯರಿಗೆ ಸಾಲ ಸೌಲಭ್ಯ, ಸಂಘದ ಮೂಲಕ ಮಾರಾಟ, ಸಂಸ್ಕರಣೆ, ಗೋದಾಮು ನಿರ್ಮಾಣ, ಅಡಿಕೆ ಮಿಕ್ಸಿಂಗ್ ಯಂತ್ರ ಖರೀದಿಸುವುದು, ಮರಣೋತ್ತರ ಪರಿಹಾರ, ವಿಶ್ರಾಂತಿ ಗೃಹ ನಿರ್ಮಾಣ, ವಾಹನ ನಿಲ್ದಾಣ ಸೇರಿ ಹಲವಾರು ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.