ADVERTISEMENT

ಬೆಂಗಳೂರು: ₹9.82 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:27 IST
Last Updated 19 ಫೆಬ್ರುವರಿ 2022, 20:27 IST
ಜಪ್ತಿ ಮಾಡಿರುವ ಡ್ರಗ್ಸ್
ಜಪ್ತಿ ಮಾಡಿರುವ ಡ್ರಗ್ಸ್   

ಬೆಂಗಳೂರು: ವಿದೇಶದಿಂದ ಕೊರಿಯರ್ ಮೂಲಕ ನಗರಕ್ಕೆ ತರಿಸಿಕೊಂಡಿದ್ದ ₹ 9.82 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ನೈಜೀರಿಯಾ ಪ್ರಜೆ ಸೇರಿ ಇಬ್ಬರು ಆರೋ‍ಪಿಗಳನ್ನು ಬಂಧಿಸಿದ್ದಾರೆ.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋರಿಯರ್‌ನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿರುವ ಮಾಹಿತಿ ಲಭ್ಯವಾಗಿತ್ತು. ಸರಕು ಸಾಗಣೆ (ಕಾರ್ಗೊ) ವಿಭಾಗದಲ್ಲಿ ಕೊರಿಯರ್‌
ಪೊಟ್ಟಣಗಳ ಪರಿಶೀಲನೆ ನಡೆಸಲಾಯಿತು. ಇದೇ ವೇಳೆ ಎರಡು ಪೊಟ್ಟಣಗಳಲ್ಲಿ ₹ 7 ಕೋಟಿ ಮೌಲ್ಯದ ಹೆರಾಯಿನ್ ಹಾಗೂ ₹ 2.82 ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆಗಳು ಪತ್ತೆಯಾದವು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ನಗರದಲ್ಲಿ ವಾಸವಿದ್ದ ಇಬ್ಬರ ಹೆಸರಿಗೆ ಬೆಲ್ಜಿಯಂ ಹಾಗೂ ತಾಂಜಾನಿಯಾ ದೇಶಗಳಿಂದ ಬಂದಿದ್ದ ಎರಡು ಕೊರಿಯರ್‌ಗಳಲ್ಲಿ ಡ್ರಗ್ಸ್ ಸಿಕ್ಕಿದೆ. ಅಂತರರಾಷ್ಟ್ರೀಯ ಪೆಡ್ಲರ್‌ಗಳು, ಕೊರಿಯರ್ ಕಳುಹಿಸಿರುವ ಮಾಹಿತಿ ಇದೆ’ ಎಂದೂ ತಿಳಿಸಿವೆ.

ADVERTISEMENT

ತಮಿಳುನಾಡಿನಲ್ಲಿ ವಾಸ: ‘ತಮಿಳುನಾಡಿನಲ್ಲಿ ವಾಸವಿರುವ ನೈಜೀರಿಯಾ ಪ್ರಜೆ ವಿಳಾಸಕ್ಕೆ ಕೊರಿಯರ್ ಬಂದಿತ್ತು. ಆತನನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.