ಬೆಂಗಳೂರು: ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೋಗ್ರಫಿ (ಎಂಎಪಿ) ಸಂಸ್ಥೆಯು ತನ್ನ ಕೇಂದ್ರದಲ್ಲಿ ಮಾರ್ಚ್ 8ರಿಂದ ಜೂನ್ 15ರವರೆಗೆ ‘ಅಂಚುಗಳಲ್ಲಿ ಅಂತ್ಯವಾಗದ ನಾವು’ ಎಂಬ ಶೀರ್ಷಿಕೆಯಡಿ ಕಲಾ ಪ್ರದರ್ಶನ ಹಮ್ಮಿಕೊಂಡಿದೆ.
ಕಲಾವಿದ ರವಿಕುಮಾರ್ ಕಾಶಿ ಅವರ ಕಲಾಕೃತಿಗಳು ಇಲ್ಲಿ ಪ್ರದರ್ಶನ ಕಾಣಲಿವೆ. ಕಾಗದಗಳಲ್ಲಿ ವಿವಿಧ ಕಲಾಕೃತಿಗಳನ್ನೂ ಅವರು ರೂಪಿಸಿದ್ದಾರೆ. ಕಾಗದಗಳ ಸಾಂಪ್ರದಾಯಿಕ ಬಳಕೆ ಮತ್ತು ಉದ್ದೇಶವನ್ನು ಮೀರಿ, ಮರುಕಲ್ಪಿಸಿದ್ದಾರೆ. ಅವುಗಳ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.