ADVERTISEMENT

‘ಪ್ರಶಸ್ತಿಗಳು ಕಲಾವಿದರ ಕೊಡುಗೆ ಅಳೆಯುವ ಮಾನದಂಡವಲ್ಲ’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 18:48 IST
Last Updated 28 ಆಗಸ್ಟ್ 2025, 18:48 IST
ಶಿಬಿರದಲ್ಲಿ ಪ್ರದರ್ಶಿಸಿರುವ ಕಟ್ಟಿಗೆಯ ಕಲಾಕೃತಿಯ ಬಗ್ಗೆ ಕಲಾವಿದರೊಬ್ಬರು ವಿವರಿಸಿದರು. ಪ.ಸ. ಕುಮಾರ್, ಕೆ.ಸಿ. ರಾಮಮೂರ್ತಿ ಉಪಸ್ಥಿತರಿದ್ದರು
ಶಿಬಿರದಲ್ಲಿ ಪ್ರದರ್ಶಿಸಿರುವ ಕಟ್ಟಿಗೆಯ ಕಲಾಕೃತಿಯ ಬಗ್ಗೆ ಕಲಾವಿದರೊಬ್ಬರು ವಿವರಿಸಿದರು. ಪ.ಸ. ಕುಮಾರ್, ಕೆ.ಸಿ. ರಾಮಮೂರ್ತಿ ಉಪಸ್ಥಿತರಿದ್ದರು   

ಬೆಂಗಳೂರು: ‘ಪ್ರಶಸ್ತಿಗಳು ಕಲಾವಿದರ ಕೊಡುಗೆಯನ್ನು ಅಳೆಯುವ ಏಕೈಕ ಮಾನದಂಡವಲ್ಲ ಎಂದು ಸಿಎಂಆರ್‌ ವಿಶ್ವವಿದ್ಯಾಲಯ ಹಾಗೂ ಸಿಎಂಆರ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ. ರಾಮಮೂರ್ತಿ ಹೇಳಿದರು. 

ಸಿಎಂಆರ್ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗ ಆಯೋಜಿಸಿದ್ದ ‘ಬ್ರಷಸ್ ಆ್ಯಂಡ್‌ ಬಿಯ್ಯಾಂಡ್’ ರಾಷ್ಟ್ರೀಯ ವಾಸ್ತುಶಿಲ್ಪ ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಲಾವಿದರು ಸಮಾಜದಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ. ಈ ಶಿಬಿರವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಇದು ಕಲಾವಿದರ ಸಂಪರ್ಕ ಸೇತುವೆಯಾಗಿದೆ’ ಎಂದರು. 

ಈ ಶಿಬಿರದಲ್ಲಿ ವುಡ್ ಕಟ್ ಮುದ್ರಣ, ಮಿಶ್ರ ಮಾಧ್ಯಮ, ಚಿತ್ರಕಲೆ ಸೇರಿದಂತೆ ಅನೇಕ ಕಲಾ ಪ್ರಕಾರಗಳು ನೋಡುಗರ ಕಣ್ಮನ ಸೆಳೆದವು. ಈ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. 

ADVERTISEMENT

ಏಕ್ಯಾ ಸಮೂಹ ಶಾಲೆಗಳ ಸಂಸ್ಥಾಪಕಿ ತ್ರೀಸ್ತಾ ರಾಮಮೂರ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್ ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್. ಜಯದೀಪ್ ಆರ್. ರೆಡ್ಡಿ, ಸಿಎಂಆರ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಪ್ರವೀಣ್ ಆರ್., ಕುಲಸಚಿವ ಧನಂಜಯ ಎಂ., ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾಗದ ನಿರ್ದೇಶಕರಾದ ಮುರಳೀಧರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.