ಬೆಂಗಳೂರು : ಶಿವಾಜಿನಗರ ಸೆಪ್ಪಿಂಗ್ಸ್ ರಸ್ತೆಯ ಮುತ್ಯಾಲಮ್ಮ ದೇವಿ ರಥೋತ್ಸವ ಮೇ 22ರಂದು ನಡೆಯಲಿದೆ.
ಮಂಗಳವಾರ ವನಭೋಜನದಿಂದ ಮಹೋತ್ಸವ ಆರಂಭವಾಗಿದ್ದು, ಮೇ 21ರಂದು ದೀಪೋತ್ಸವ ನಡೆಯಲಿದೆ. ಮೇ 29 ರಂದು ಶಯನೋತ್ಸವದೊಂದಿಗೆ ಮುಕ್ತಾಯಗೊಳ್ಳಲಿದೆ.
ಏಪ್ರಿಲ್ ತಿಂಗಳಲ್ಲಿ ರಥೋತ್ಸವ ನಡೆಯಬೇಕಿತ್ತಾದರೂ ಲೋಕಸಭೆ ಚುನಾವಣೆ ಇದ್ದಿದ್ದರಿಂದ ಮುಂದೂಡಲಾಗಿತ್ತು ಎಂದು ಮುತ್ಯಾಲಮ್ಮ ದೇವಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.