ADVERTISEMENT

ಬೆಂಗಳೂರು | ಕಾರು ಅಡ್ಟಗಟ್ಟಿ ಹಲ್ಲೆಗೆ ಯತ್ನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 16:41 IST
Last Updated 20 ಆಗಸ್ಟ್ 2024, 16:41 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಕಾರಿನಲ್ಲಿ ತೆರಳುತ್ತಿದ್ದ ದಂಪತಿ ಅಡ್ಟಗಟ್ಟಿ ಗಲಾಟೆ ಮಾಡಿ, ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ನವೀನ್ ರೆಡ್ಡಿ (30) ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಸರ್ಜಾಪುರ ಮುಖ್ಯರಸ್ತೆಯಲ್ಲಿ ಜಿತಿನ್ ರಾಜ್ ಎಂಬುವವರು ಪತ್ನಿ ಹಾಗೂ ಮಕ್ಕಳ ಜತೆ ಸೋಮವಾರ ರಾತ್ರಿ ಕಾರಿನಲ್ಲಿ ಇಂದಿರಾನಗರದ ತಮ್ಮ ಸ್ನೇಹಿತನ ಮನೆಗೆ ಹೋಗುತ್ತಿದ್ದರು. ವಾಹನ ಹಿಂದಿಕ್ಕುವ ವಿಚಾರಕ್ಕೆ ಈ ಜಗಳ ನಡೆದಿದೆ. 

ADVERTISEMENT

ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಕಾರು ಅಡ್ಡಗಟ್ಟಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕಾರಿನ ವೈಪರ್ ಕಿತ್ತು ಹಾಕಿ, ಗಾಜು ಒಡೆದು ಹಾಕಿದ್ದಾರೆ. ಕಾರಿನಲ್ಲಿ ಮಗು ಇದೆ ಎಂದು ಹೇಳಿದರೂ ಆತ ಗಲಾಟೆ ಮುಂದುವರೆಸಿದ್ದಾನೆ. ಈ ದೃಶ್ಯವನ್ನು  ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದು, ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡು, ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರಿಗೆ ಟ್ಯಾಗ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.