ADVERTISEMENT

ಆಟೊದಲ್ಲಿ ಚಾಲಕನ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 16:30 IST
Last Updated 9 ಏಪ್ರಿಲ್ 2021, 16:30 IST

ಬೆಂಗಳೂರು: ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಿಂತಿದ್ದ ಆಟೊದಲ್ಲಿ ಚಾಲಕ ನಾಗರಾಜ್ (50) ಎಂಬುವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

‘ಹಲವು ವರ್ಷಗಳಿಂದ ಆಟೊ ಚಲಾಯಿಸುತ್ತಿದ್ದ ನಾಗರಾಜ್, ಜೊತೆಗೆ ಆಟೊದಲ್ಲಿ ಎಳನೀರು ಪೂರೈಕೆ ಕೆಲಸ ಮಾಡುತ್ತಿದ್ದರು. ಬಿಎಸ್‌ಎನ್‌ಎಲ್‌ ಕಚೇರಿ ಎದುರು ನಿಂತಿದ್ದ ಆಟೊದಲ್ಲೇ ಅವರ ಮೃತದೇಹವಿತ್ತು’ ಎಂದು ಪೊಲೀಸರು ಹೇಳಿದರು.

‘ಆಟೊ ಚಲಾಯಿಸಿಕೊಂಡು ಬಂದಿದ್ದ ನಾಗರಾಜ್, ಅನಾರೋಗ್ಯದಿಂದಾಗಿ ಆಟೊದಲ್ಲೇ ಅಸುನೀಗಿರುವ ಮಾಹಿತಿ ಇದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.