ಬೆಂಗಳೂರು: ಗಿರಿನಗರ 80 ಅಡಿ ರಸ್ತೆಯಲ್ಲಿ ಬುಧವಾರ ರಾತ್ರಿ ಅಪಘಾತ ಸಂಭವಿಸಿದ್ದು, ಆಟೊ ಚಾಲಕ ಪೂಜಾರಿ ದೇವರಾಜ್ ನಾಯಕ್ (32) ಅವರು ಮೃತಪಟ್ಟಿದ್ದಾರೆ.
‘ಆಂಧ್ರಪ್ರದೇಶದ ದೇವರಾಜ್, ಹೊಸಕೆರೆ ಹಳ್ಳಿಯಲ್ಲಿ ವಾಸವಿದ್ದರು. ದೇವರಾಜ್ ಅವರು ಹೊಸಕೆರೆಹಳ್ಳಿ ಕ್ರಾಸ್‌ನಿಂದ ಸೀತಾ ವೃತ್ತದ ಕಡೆಗೆ ಗಿರಿನಗರ 80 ಅಡಿ ರಸ್ತೆ ಮೂಲಕ ಆಟೊದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ನಿಯಂತ್ರಣ ತಪ್ಪಿದ್ದ ಆಟೊ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಆಟೊ ಉರುಳಿಬಿದ್ದು, ತೀವ್ರ ಗಾಯಗೊಂಡಿದ್ದ ದೇವರಾಜ್ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ಬಸವನಗುಡಿ ಸಂಚಾರ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.