ADVERTISEMENT

ಜಾಗೃತಿ ಮೂಡಿಸಿ, ಕೊರೊನಾ ಓಡಿಸಿ: ಅಭಿಯಾನ ಹಮ್ಮಿಕೊಂಡ ಎನ್‌ಎಸ್‌ಎಸ್‌ ಘಟಕ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 19:39 IST
Last Updated 10 ಸೆಪ್ಟೆಂಬರ್ 2020, 19:39 IST
ಕೊರೊನಾ ವಿರುದ್ಧದ ಜಾಗೃತಿ ಚಿತ್ರಗಳನ್ನು ಬರೆದು, ಮನೆಯ ಬಾಗಿಲಿನ ಮೇಲೆ ಅಂಟಿಸಿರುವ ವಿದ್ಯಾರ್ಥಿನಿ
ಕೊರೊನಾ ವಿರುದ್ಧದ ಜಾಗೃತಿ ಚಿತ್ರಗಳನ್ನು ಬರೆದು, ಮನೆಯ ಬಾಗಿಲಿನ ಮೇಲೆ ಅಂಟಿಸಿರುವ ವಿದ್ಯಾರ್ಥಿನಿ   

ಬೆಂಗಳೂರು: ನಗರದ ಸೇಂಟ್‌ ಜೋಸೆಫ್‌ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಘಟಕವು ಕೋವಿಡ್‌ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಜಾಗೃತಿ ಮೂಡಿಸಿ, ಕೊರೊನಾ ಓಡಿಸಿ’ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಕೋವಿಡ್‌–19 ವಿರುದ್ಧ ಜಾಗೃತಿ ಮತ್ತು ಸುರಕ್ಷಿತ ಕ್ರಮಗಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿ, ಮನೆಯ ಬಾಗಿಲಿನ ಮೇಲೆ ಅಥವಾ ಗೇಟ್‌ ಮೇಲೆ ಅಂಟಿಸಿ, ಅದರ ಚಿತ್ರ ಅಥವಾ ವಿಡಿಯೊ ಮಾಡಲು ಹೇಳಲಾಗಿತ್ತು. ಅದರಂತೆ, ಹಲವರು ವಿಡಿಯೊ ಮಾಡಿದ್ದರು. ಇದನ್ನು ಎನ್‌ಎಸ್‌ಎಸ್‌ನ ಇನ್‌ಸ್ಟಾ ಗ್ರಾಂ ಪುಟದಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಇದನ್ನು, ಈವರೆಗೆ 1,321 ಜನ ವೀಕ್ಷಿಸಿದ್ದಾರೆ’ ಎಂದು ಕಾಲೇಜಿನ ಎನ್‌ಎಸ್ಎಸ್‌ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಕೆ.ಆರ್. ಸಹನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT