ADVERTISEMENT

ಇದೇ 15 ರಿಂದ ಅರಣ್ಯವಾಸಿಗಳ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:06 IST
Last Updated 11 ಫೆಬ್ರುವರಿ 2025, 14:06 IST
ನ್ಯಾ. ಎಚ್‌.ಎನ್‌.ನಾಗಮೋಹನದಾಸ್‌ ಅವರು ಕಾನೂನು ಜಾಗೃತಿ ಜಾಥಾದ ಲಾಂಛನವನ್ನು ಬಿಡುಗಡೆ ಮಾಡಿದರು. ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಅನಂತನಾಯ್ಕ, ಕಿಗ್ಗ ನಾಗರಾಜ, ಶ್ರೀಹರಿ, ಮೋಹನ್‌ ಕುಮಾರ್ ಜತೆಗಿದ್ದರು.
ನ್ಯಾ. ಎಚ್‌.ಎನ್‌.ನಾಗಮೋಹನದಾಸ್‌ ಅವರು ಕಾನೂನು ಜಾಗೃತಿ ಜಾಥಾದ ಲಾಂಛನವನ್ನು ಬಿಡುಗಡೆ ಮಾಡಿದರು. ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಅನಂತನಾಯ್ಕ, ಕಿಗ್ಗ ನಾಗರಾಜ, ಶ್ರೀಹರಿ, ಮೋಹನ್‌ ಕುಮಾರ್ ಜತೆಗಿದ್ದರು.    

ಬೆಂಗಳೂರು: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಇದೇ 15 ರಿಂದ ಆರಂಭವಾಗುವ ರಾಜ್ಯ ಮಟ್ಟದ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾ–2025 ರ ಲಾಂಛನವನ್ನು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾ. ನಾಗಮೋಹನದಾಸ್‌, ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ಅವಶ್ಯ. ಕಾನೂನಿನ ತಿಳಿವಳಿಕೆ ಇಲ್ಲದೇ ಭೂಮಿ ಹಕ್ಕಿನಿಂದ ವಂಚಿತರಾಗಬಾರದು. ಹೋರಾಟದ ಜೊತೆಯಲ್ಲಿ ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ನೀಡುವುದು ಅಗತ್ಯ ಎಂದರು.

ನಿರ್ದಿಷ್ಟ ದಾಖಲಾತಿ ಅಗತ್ಯ ಇಲ್ಲದಿರುವುದು, ಕಾನೂನು ಬಾಹಿರ ಅರ್ಜಿ ತಿರಸ್ಕಾರಕ್ಕೆ ಕಡಿವಾಣ, ಅಸಮರ್ಪಕ ಜಿಪಿಎಸ್‌ಗೆ ಕಾನೂನು ಪರಿಹಾರ ಮತ್ತು ಅರಣ್ಯವಾಸಿಗಳಿಗೆ ಕಾನೂನಿನ ಪ್ರಕಾರ ಇರುವ ಬದುಕುವ ಹಕ್ಕಿನ ಕುರಿತು ಜಾಗೃತಿ ಮೂಡಿಸಲಾಗುವುದು. 16 ಜಿಲ್ಲೆಗಳ 500 ಸ್ಥಳಗಳಲ್ಲಿ ಅರಣ್ಯವಾಸಿಗಳಿಗಾಗಿ ಕಾನೂನು ಜಾಗೃತಿ ಕಾರ್ಯಕ್ರಮ ಜರುಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.