ADVERTISEMENT

70 ವರ್ಷ ದಾಟಿದವರಿಗೂ ‘ಆಯುಷ್ಮಾನ್ ಭಾರತ್‌’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 18:53 IST
Last Updated 17 ಸೆಪ್ಟೆಂಬರ್ 2025, 18:53 IST
<div class="paragraphs"><p>ಆಯುಷ್ಮಾನ್ ಭಾರತ</p></div>

ಆಯುಷ್ಮಾನ್ ಭಾರತ

   

ಬೆಂಗಳೂರು: 70 ವರ್ಷ ದಾಟಿದ ಹಿರಿಯರಿಗೆ ಕೇಂದ್ರ ಸರ್ಕಾರದ ವಯೋ ವಂದನಾ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಎಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರಿಗೆ ಚಿಕಿತ್ಸೆಗಾಗಿ ₹ 5 ಲಕ್ಷ ಟಾಪ್‌ ಅಪ್‌ ಒದಗಿಸಲಾಗುವುದು. ಅರ್ಜಿ ಸಲ್ಲಿಸಲು ಬಯಸುವವರಿಗೆ ನೋಂದಣಿಗಾಗಿ ಆಯುಷ್ಮಾನ್ ಅಪ್ಲಿಕೇಶನ್‌ನಲ್ಲಿ ಮತ್ತು ವೆಬ್‌ ಪೋರ್ಟಲ್‌ನಲ್ಲಿ (beneficiary.nha.in) ಪ್ರತ್ಯೇಕ ಮಾಡ್ಯೂಲ್‌ ರಚಿಸಲಾಗಿದೆ. ನೋಂದಣಿ ಮಾಡಿಕೊಂಡವರಿಗೆ ವಿಶಿಷ್ಟವಾದ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.