ADVERTISEMENT

ರೈಲು ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 18:58 IST
Last Updated 21 ಫೆಬ್ರುವರಿ 2019, 18:58 IST

ಬೆಂಗಳೂರು: ನೈಋತ್ಯರೈಲ್ವೆ ವ್ಯಾಪ್ತಿಯ ಬಂಗಾರಪೇಟೆ ಯಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರು–ಜೋಳರ‍‍ಪೇಟೆ ನಡುವೆ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಸಂಚಾರ ರದ್ದು: ಬಂಗಾರಪೇಟೆ–ಕೋಲಾರ, ಬೆಂಗಳೂರು ದಂಡು –ಬಂಗಾರಪೇಟೆ, ಮಾರಿಕುಪ್ಪಂ–ಬಂಗಾರಪೇಟೆ, ಬೆಂಗಳೂರು–ಮಾರಿಕುಪ್ಪಂ, ಮಾರಿಕುಪ್ಪಂ– ಬೈಯಪ್ಪನಹಳ್ಳಿ, ಮಾರಿಕುಪ್ಪಂ–ಬಾಣಸವಾಡಿಸಂಚರಿಸುವ ಪ್ಯಾಸೆಂಜರ್‌ ರೈಲುಗಳು ಸಂಚಾರ ಫೆ. 22ರಿಂದ 24ರವರೆಗೆ ರದ್ದುಗೊಂಡಿವೆ.

ನಿಲ್ದಾಣ ಬದಲಾವಣೆ: ಬಂಗಾರಪೇಟೆ–ಕುಪ್ಪಂ ಮೆಮು ರೈಲು, ಬೆಂಗಳೂರು–ಬಂಗಾರಪೇಟೆ ಮೆಮು ರೈಲು ಮತ್ತು ಬೆಂಗಳೂರು–ಬಂಗಾರಪೇಟೆ ಎಕ್ಸಪ್ರೆಸ್‌ ರೈಲು ಬಂಗಾರಪೇಟೆಯ ಬದಲಾಗಿ ವರದಾಪುರ ರೈಲು ನಿಲ್ದಾಣದಿಂದ ಸಂಚರಿಸಲಿವೆ.

ADVERTISEMENT

ಮಾರ್ಗ ಬದಲಾವಣೆ: ಬೆಂಗಳೂರು ದಂಡು ಪ್ರದೇಶ–ನಡುವೆ ಸಂಚರಿಸುವ ಪ್ಯಾಸೆಂಜರ್‌ ರೈಲುಗಳು ಬಂಗಾರಪೇಟೆ, ಕೃಷ್ಣರಾಜಪುರಂ, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ ಬದಲಾಗಿ ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ಮತ್ತುಚನ್ನಸಂದ್ರ ಮಾರ್ಗವಾಗಿ ಸಂಚರಿಸಲಿವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.