ಬೆಂಗಳೂರು: ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಬಕ್ರೀದ್ ವೇಳೆ ಬಡ ಮುಸ್ಲಿಮರಿಗೆ ಮಾಂಸ ನೀಡುವ ಬದಲು, ಇದೇ ಮೊತ್ತದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು’ ಎಂದು ಬೆನ್ಸನ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಕೆ. ಅರ್ಷದ್ ಮನವಿ ಮಾಡಿದ್ದಾರೆ.
‘ಹಬ್ಬಕ್ಕಾಗಿ ಕುರಿಗಳನ್ನು ಖರೀದಿಸಲು ಸಾವಿರಾರು ಜನರು ಮಾರುಕಟ್ಟೆಗೆ ಹೋಗುತ್ತಾರೆ. ಈ ವೇಳೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೆ, ಮಾಂಸ ಪಡೆಯಲು ಹಲವು ಕಡೆಯಿಂದ ನೂರಾರು ಜನರು ಬರುತ್ತಾರೆ. ಈ ವೇಳೆ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಕುರಿಗಳನ್ನು ಖರೀದಿಸಿ, ಮಾಂಸ ದಾನ ಮಾಡುವ ಬದಲು, ಸೇವಾ ಕಾರ್ಯ ನಡೆಸುವುದಕ್ಕೆ ಹಣ ನೀಡುವ ಮೂಲಕ ಹಬ್ಬ ಆಚರಿಸಬೇಕು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.