ಬೆಂಗಳೂರು: ಶಾಲಾ– ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವದ ಗುಣ, ದೇಶಭಕ್ತಿ ಬೆಳೆಸುವ ಉದ್ದೇಶದಿಂದ ನಗರದಲ್ಲಿ ಆಯೋಜಿಸಿದ್ದ 10 ದಿನಗಳ ಎನ್‌ಸಿಸಿ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಕೆಡೆಟ್‌ಗಳು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿದ್ದರು.
ಕಮಾಂಡೆಂಟ್ ಕರ್ನಲ್ ಪಂಕಜ್ ಸಿನ್ಹಾ ತೇತೃತ್ವದ ತಂಡವು ಶಿಬಿರ ಆಯೋಜಿಸಿತ್ತು. ತರಬೇತಿಯು ಕಠಿಣ ಮಿಲಿಟರಿ ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿ ಎರಡನ್ನೂ ಒಳಗೊಂಡಿತ್ತು.
ಶಿಸ್ತು ಮತ್ತು ಸಮಯ ಪಾಲನೆ, ಶಸ್ತ್ರಾಸ್ತ್ರ ನಿರ್ವಹಣೆಯ ಬಗ್ಗೆ ತಿಳಿವಳಿಕೆ, ತುರ್ತು ಸನ್ನಿವೇಶಗಳಲ್ಲಿ ಸ್ಪಂದನೆ, ಭದ್ರತೆ ಮತ್ತು ಜಾಗರೂಕತೆ, ಕಾವಲು ಮತ್ತು ರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಇಂಡಿಯನ್ ಬ್ಯಾಂಕ್‌ನ ಮಾಜಿ ಅಧಿಕಾರಿ ಕೆ.ಎಲ್. ರಾವ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆ, ವೃತ್ತಿ ಸಮಾಲೋಚನೆ, ಸಾಮಾಜಿಕ ಸಮಸ್ಯೆ, ಪರಿಹಾರ ಕುರಿತು ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.