ADVERTISEMENT

ಬೆಂಗಳೂರು: ಮಕ್ಕಳ ವಚನ ಮೇಳಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 20:19 IST
Last Updated 25 ಅಕ್ಟೋಬರ್ 2025, 20:19 IST
<div class="paragraphs"><p>ಬಸವಣ್ಣ</p></div>

ಬಸವಣ್ಣ

   

ಬೆಂಗಳೂರು: ವಚನಜ್ಯೋತಿ ಬಳಗವು ನವೆಂಬರ್ 18ರಿಂದ 27ರವರೆಗೆ ನಾಗರಬಾವಿ ಸಮೀಪದ ಮಲ್ಲತ್ಹಳ್ಳಿಯ ಕಲಾಗ್ರಾಮದಲ್ಲಿ ಮಕ್ಕಳ ವಚನ ಮೇಳವನ್ನು ಆಯೋಜಿಸಿದೆ.

ಶಿಶುವಿಹಾರ–ಮಾಂಟೇಸರಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಮಕ್ಕಳ ವಚನ ಮೇಳದಲ್ಲಿ ಪಾಲ್ಗೊಳ್ಳಬಹುದು. ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನಚಿತ್ರ, ವಚನ ನೃತ್ಯ, ವಚನ ಅಂತ್ಯಾಕ್ಷರಿ,ವಚನ ರಸಪ್ರಶ್ನೆ, ವಚನ ರೂಪಕ, ವಚನವೇಷಭೂಷಣ, ವಚನ ಕಥೆ, ವಚನ
ಕಂಠಪಾಠ ಮತ್ತು ಸಮೂಹ ವಚನಗಾಯನ ಸ್ಪರ್ಧೆಗಳು ನಡೆಯಲಿವೆ. ಆಸಕ್ತ ವಿದ್ಯಾರ್ಥಿಗಳು ಅಕ್ಟೋಬರ್ 31ರೊಳಗೆ ನೋಂದಾಯಿಸಿಕೊಳ್ಳಬೇಕು. ಶಾಲೆಗಳಿಂದ ಅಥವಾ ವೈಯಕ್ತಿಕವಾಗಿಯೂ ಭಾಗವಹಿಸಬಹುದಾಗಿದೆ ಎಂದು ವಚನ ಜ್ಯೋತಿ ಬಳಗದ ಅಧ್ಯಕ್ಷಎಸ್‌. ಪಿನಾಕಪಾಣಿ ತಿಳಿಸಿದ್ದಾರೆ.

ADVERTISEMENT

ವಿವರಕ್ಕೆ: 9845184367 ಅಥವಾ 9945964727.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.