ADVERTISEMENT

ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 0:02 IST
Last Updated 25 ಸೆಪ್ಟೆಂಬರ್ 2025, 0:02 IST
<div class="paragraphs"><p>‘ಅಣ್ಣನ ನೆನಪು’ ನಾಟಕದ ದೃಶ್ಯ</p></div>

‘ಅಣ್ಣನ ನೆನಪು’ ನಾಟಕದ ದೃಶ್ಯ

   

‘ಅತಿಕಾಯ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನ

ಬೆಂಗಳೂರು: ಸಪ್ತಕ ಬೆಂಗಳೂರು ಸಹಯೋಗದಲ್ಲಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಇದೇ 26ರಂದು ಸಂಜೆ 6 ಗಂಟೆಗೆ ವಿಜಯನಗರದ ಜೈಮಿನಿರಾವ್ ವೃತ್ತದಲ್ಲಿರುವ ಹೋಟೆಲ್ ಸೌಥ್ ರುಚಿಸ್ ಸಭಾಂಗಣದಲ್ಲಿ ‘ಅತಿಕಾಯ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಹಮ್ಮಿಕೊಂಡಿದೆ. 

ADVERTISEMENT

ಇದನ್ನು ಹಟ್ಟಿಯಂಗಡಿ ರಾಮ ಭಟ್ಟ ಅವರು ರಚಿಸಿದ್ದಾರೆ. ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ (ಭಾಗವತಿಕೆ), ಎಸ್.ಪಿ. ಘಾಟಕ್ ಕಾರ್ಕಳ (ಮದ್ದಳೆ), ಮುಮ್ಮೇಳದಲ್ಲಿ ನಾರಾಯಣ ಯಾಜಿ ಸಾಲೆಬೈಲು, ದಿವಾಕರ ಹೆಗಡೆ ಕೆರೆಹೊಂಡ, ಶಶಾಂಕ ಅರ್ನಾಡಿ, ಪ್ರಸನ್ನ ಭಟ್ ಮಾಗೋಡು ಮತ್ತು ಸುಹಾಸ್ ಮರಾಠೆ ಪಾಲ್ಗೊಳ್ಳಲಿದ್ದಾರೆ. 

ಈ ಪ್ರದರ್ಶವನ್ನು ಎಸ್.ಎಂ.ಹೆಗಡೆ ಬಣಗಿ
ಉದ್ಘಾಟಿಸಲಿದ್ದು, ಸಪ್ತಕ ಬೆಂಗಳೂರಿನ ಜಿ.ಎಸ್.ಹೆಗಡೆ ಅವರು ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಸಂಪರ್ಕಕ್ಕೆ: 7899830606

****

ಕಲಾಕೃತಿಗಳ ಪ್ರದರ್ಶನ, ಮಾರಾಟ 27ಕ್ಕೆ ಆರಂಭ

ಬೆಂಗಳೂರು: ಸಮುದಾಯ ಕರ್ನಾಟಕ ಸಂಘಟನೆಯು ‘ಮನುಷ್ಯತ್ವದೆಡೆಗೆ ಸಮುದಾಯ 50’ ಶೀರ್ಷಿಕೆಯಡಿ ಕಲಾ ಶಿಬಿರದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟವನ್ನು ಇದೇ 27ರಿಂದ 29ರವರೆಗೆ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

****

‘ಸ್ವರ ಸಂಧ್ಯಾ’ ಸಂಗೀತ ಸಂಜೆ

ಬೆಂಗಳೂರು: ಶ್ರೀರಾಮ ಕಲಾ ವೇದಿಕೆಯು ಇದೇ 27ರಂದು ಸಂಜೆ 5.30ಕ್ಕೆ ‘ಸ್ವರ ಸಂಧ್ಯಾ’ ಶೀರ್ಷಿಕೆಯಡಿ ಸಂಗೀತ ಸಂಜೆ ಕಾರ್ಯಕ್ರಮವನ್ನು ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಇಎಸ್‌ವಿ ಹಾಲ್‌ನಲ್ಲಿ ಹಮ್ಮಿಕೊಂಡಿದೆ. 

ಮಿಲಿಂದ್ (ತಬಲಾ), ವಿಶ್ವಜಿತ್ ಕಿಣಿ (ಹಾರ್ಮೋನಿಯಂ), ರಾಮ್ ದೇಶಪಾಂಡೆ (ಗಾಯನ), ಉದಯರಾಜ್ ಕರ್ಪೂರ್ (ತಬಲಾ) ಹಾಗೂ ರವೀಂದ್ರ ಕಟೋಟಿ (ಹಾರ್ಮೋನಿಯಂ) ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

****

‘ಹುತ್ತದಲ್ಲಿ ಹುತ್ತ’ ನಾಟಕ ಪ್ರದರ್ಶನ

ಬೆಂಗಳೂರು: ಅಂತರಂಗ ತಂಡವು ಇದೇ 27 ಮತ್ತು 28ರಂದು ಸಂಜೆ 7.15ಕ್ಕೆ ಎನ್.ಆರ್. ಕಾಲೊನಿಯಲ್ಲಿರುವ ಡಾ.ಸಿ.ಅಶ್ವಥ್ ಕಲಾ ಭವನದಲ್ಲಿ ‘ಹುತ್ತದಲ್ಲಿ ಹುತ್ತ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. 

ಈ ನಾಟಕವನ್ನು ಟಿ.ಪಿ. ಕೈಲಾಸಂ ಅವರು ರಚಿಸಿದ್ದಾರೆ. ಇದು ಹಾಸ್ಯ ನಾಟಕವಾಗಿದ್ದು, ಮೂಲದಲ್ಲಿ ಬಿ.ವಿ. ರಾಜಾರಾಂ ಅವರು ನಿರ್ದೇಶಿಸಿದ್ದಾರೆ. ಈಗ ಅರ್ಚನಾ ಶ್ಯಾಮ್ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನ ಕಾಣಲಿದೆ. ಟಿಕೆಟ್‌ಗಳು ಬುಕ್‌ ಮೈ ಶೋದಲ್ಲಿ ಲಭ್ಯವೆಂದು ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ: 9880914509

****

‘ಕೃಷ್ಣಸಂಧಾನ’ ಯಕ್ಷಗಾನ ತಾಳಮದ್ದಳೆ

ಬೆಂಗಳೂರು: ಸೆಂಟರ್ ಫಾರ್‌ಫಿಲ್ಮ್ ಆ್ಯಂಡ್ ಡ್ರಾಮಾ ವತಿಯಿಂದ ಇದೇ 28ರಂದು ಮಧ್ಯಾಹ್ನ 3 ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾದಲ್ಲಿ ‘ಕೃಷ್ಣಸಂಧಾನ’ ಯಕ್ಷಗಾನ ತಾಳಮದ್ದಳೆ ಹಮ್ಮಿಕೊಳ್ಳಲಾಗಿದೆ. 

ಈ ಪ್ರಸಂಗವನ್ನು ದೇವಿದಾಸ್ ಅವರು ರಚಿಸಿದ್ದಾರೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಸಾರಥ್ಯದಲ್ಲಿ ನಡೆಯಲಿದೆ. ಮಧೂರು ವಿಷ್ಣುಪ್ರಸಾದ ಕಲ್ಲೂರಾಯ (ಭಾಗವತಿಕೆ), ಅಮೋಘ ಕುಂಟಿನಿ (ಮದ್ದಳೆ ಮತ್ತು ಮೃದಂಗ), ಪವನರಾಜ ಕಲ್ಲೂರಾಯ (ಚಡೆ), ಗೋಪಾಲಕೃಷ್ಣ ಕುಂಜತ್ತಾಯ (ಚಕ್ರತಾಳ) ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ನಾರಾಯಣ ಯಾಜಿ, ಕೆ.ಈ. ರಾಧಾಕೃಷ್ಣ , ಮಟ್ಟಿ ರಾಮಚಂದ್ರ ರಾವ್ (ವಿದುರ) ಮುಮ್ಮೇಳದಲ್ಲಿ ರಂಜಿಸಲಿದ್ದಾರೆ.

****

‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ

ಬೆಂಗಳೂರು: ಪ್ರವರ ಥಿಯೇಟರ್ ಇದೇ 27ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. 

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಈ ನಾಟಕವನ್ನು ಹನು ರಾಮಸಂಜೀವ್ ನಿರ್ದೇಶಿಸಿದ್ದಾರೆ. ಮಾಹಿತಿಗೆ 9686869676 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.