ADVERTISEMENT

ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ: ಕ್ಯಾ. ಗೋಪಿನಾಥ್‌

ಸರ್ಕಾರಿ ವಿಮಾನ ತರಬೇತಿ ಶಾಲೆ ಮುಚ್ಚಬೇಡಿ: ಕ್ಯಾ. ಗೋಪಿನಾಥ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 15:43 IST
Last Updated 24 ನವೆಂಬರ್ 2025, 15:43 IST
ಕಾರ್ಯಕ್ರಮದಲ್ಲಿ ಕ್ಯಾ.ಜಿ.ಆರ್.ಗೋಪಿನಾಥ್‌ ಅವರನ್ನು ಸನ್ಮಾನಿಸಲಾಯಿತು. 
ಕಾರ್ಯಕ್ರಮದಲ್ಲಿ ಕ್ಯಾ.ಜಿ.ಆರ್.ಗೋಪಿನಾಥ್‌ ಅವರನ್ನು ಸನ್ಮಾನಿಸಲಾಯಿತು.    

ಬೆಂಗಳೂರು: ‘ನಗರದ ನಾಲ್ಕೂ ದಿಕ್ಕಿನಲ್ಲಿ ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಈಗಿನಿಂದಲೇ ಯೋಜನೆ ರೂಪಿಸುವ ಅಗತ್ಯವಿದೆ’ ಎಂದು ಉದ್ಯಮಿ ಕ್ಯಾಪ್ಟನ್ ಜಿ.ಆರ್‌.ಗೋಪಿನಾಥ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇವನಹಳ್ಳಿಯಲ್ಲಿ ಇರುವ ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಪ್ಪಂದ ಏಳು ವರ್ಷಗಳಲ್ಲಿ ಮುಕ್ತಾಯವಾಗಲಿದೆ. ಆ ಒಪ್ಪಂದ ಮುಗಿಯುವ ಮುನ್ನವೇ ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಸರ್ಕಾರ ಪ್ರಯತ್ನಗಳನ್ನು ಚುರುಕುಗೊಳಿಸಬೇಕು’ ಎಂದರು.

‘ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಅದಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು’ ಎಂದು ಸಲಹೆ ನೀಡಿದರು

‘ಮೈಸೂರಿನ ಮಹಾರಾಜರು ದೂರದೃಷ್ಟಿಯಿಂದ ಜಾಗ ಕೊಟ್ಟು ಆರಂಭಿಸಿದ ಸರ್ಕಾರಿ ವಿಮಾನ ತರಬೇತಿ ಶಾಲೆ ಇಂದು ದುರವಸ್ಥೆಯ ತಾಣವಾಗಿದೆ. ತರಬೇತಿ ಶಾಲೆ ಮುಚ್ಚುವಂತೆ ಕಾಣದ ಕೈಗಳು ಒತ್ತಡ ಹಾಕುತ್ತಿವೆ’ ಎಂದು ತಿಳಿಸಿದರು.

ADVERTISEMENT

ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ವ್ಯವಸ್ಥಾಪಕ ನಿರ್ದೇಶಕಿ ಕೆ.ದೀಪಶ್ರೀ, ನಿರ್ದೇಶಕರು ಉಪಸ್ಥಿತರಿದ್ದರು.

ರಕ್ಷಣಾ ವಲಯದ ಸ್ವಾವಲಂಬನೆಯಲ್ಲಿ ಬೇಕಾದಷ್ಟು ಕೆಲಸ ಮಾಡಲು ಬೆಂಗಳೂರು ಅತ್ಯಂತ ಪ್ರಶಸ್ತ ನಗರವಾಗಿದೆ. ಸರ್ಕಾರ ಇಲ್ಲಿ ವಿಮಾನ ತರಬೇತಿ ಶಾಲೆಗಳನ್ನು ಆರಂಭಿಸಬೇಕು.
ಕ್ಯಾ.ಜಿ.ಆರ್‌.ಗೋಪಿನಾಥ್‌