ಬಂಧನ
ಬೆಂಗಳೂರು: ಫ್ಲ್ಯಾಟ್ ಭೋಗ್ಯದಾರರಿಗೆ ₹ 2 ಕೋಟಿ ವಂಚಿಸಿದ ಆರೋಪದಡಿ ಕಟ್ಟಡವೊಂದರ ಮಾಲೀಕರಾದ ಸುಧಾ ಎಂಬುವವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾದ ಮೊಹಮ್ಮದ್ ನಹೀಂ ಸೇರಿ 17 ಮಂದಿ ದೂರು ನೀಡಿದ್ದರು. ಸುಧಾ ಅವರು ಗಂಗೊಂಡನಹಳ್ಳಿಯಲ್ಲಿರುವ ಐದು ಮಹಡಿಗಳ ಅಪಾರ್ಟ್‌ಮೆಂಟ್‌ವೊಂದರಲ್ಲಿ 17 ಫ್ಲ್ಯಾಟ್ ಭೋಗ್ಯಕ್ಕೆ ನೀಡಿದ್ದರು. ಇನ್ನೊಂದೆಡೆ, ಅವುಗಳ ಆಧಾರದಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದರು. ಸಾಲ ಮರುಪಾವತಿಸಿರಲಿಲ್ಲ. ಬ್ಯಾಂಕ್‌ನವರು ಜಪ್ತಿಗೆ ಬಂದಾಗ ವಂಚನೆ ನಡೆದಿರುವುದು ಗೊತ್ತಾಗಿದೆ.
17 ಮಂದಿ ಭೋಗ್ಯದಾರರು ಪ್ರತ್ಯೇಕವಾಗಿ ಹಣ ನೀಡಿ ಫ್ಲ್ಯಾಟ್ ಭೋಗ್ಯಕ್ಕೆ ಪಡೆದುಕೊಂಡಿದ್ದೆವು. ಈಗ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ ಮೇಲೆ ವಂಚನೆ ನಡೆದಿರುವುದು ಗೊತ್ತಾಗಿದೆ ಎಂದು ಭೋಗ್ಯಕ್ಕೆ ಪಡೆದವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.