ADVERTISEMENT

ತಂತ್ರಜ್ಞಾನದಿಂದ ಲಿಪಿಗಳ ಉಳಿವು ಸಾಧ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 21:06 IST
Last Updated 18 ಡಿಸೆಂಬರ್ 2021, 21:06 IST

ಬೆಂಗಳೂರು: ‘ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಅಳಿವಿನಂಚಿನಲ್ಲಿರುವ ಸ್ಥಳೀಯ ಭಾಷೆಗಳ ಲಿಪಿಯನ್ನು ಉಳಿಸುವ ಕಾರ್ಯವಾಗಬೇಕಿದೆ’ ಎಂದು ಕಥೆಗಾರ ವಿವೇಕ ಶಾನಭಾಗ ಸಲಹೆ ನೀಡಿದರು.

‘ಅಳಿವಿನಂಚಿನ ಭಾಷೆಗಳ ಲಿಪಿಯ ಭವಿಷ್ಯ’ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಜನಾಂಗದ ಭಾಷೆ ಮತ್ತು ಅದರ ಲಿಪಿಯೊಟ್ಟಿಗೆ ಅವರ ಜೀವನಶೈಲಿ, ಸಂಸ್ಕೃತಿ ಮೇಳೈಸಿರುತ್ತದೆ. ಸ್ಥಳೀಯ ಭಾಷೆಗಳ ಸೊಗಡು ಭಿನ್ನವಾಗಿರುತ್ತದೆ. ಹಾಗಾಗಿ, ಆ ಭಾಷೆಗಳನ್ನು ಉಳಿವಿನ ಜೊತೆಗೆ ಲಿಪಿಯನ್ನೂ ಜತನದಿಂದ ಉಳಿಸುವ ಕಾರ್ಯವಾಗಬೇಕಿದೆ ಎಂದು ಪ್ರತಿಪಾದಿಸಿದರು.

ADVERTISEMENT

ಲೇಖಕಿ ಕಾವೇರಿ ಪೊನ್ನ‍ಪ್ಪ ಮಾತನಾಡಿ, ‘ಕೊಡವ ಭಾಷೆಯು ವಿಭಿನ್ನ ಮತ್ತು ಶ್ರೀಮಂತಿಕೆಯಿಂದ ಕೂಡಿದೆ. ಇದರ ಲಿಪಿಯನ್ನು ಉಳಿಸುವ ಕಾರ್ಯವೂ ನಡೆಯುತ್ತಿದೆ. ಕೊಡವ ಭಾಷೆಯ ಪದ ಸಂ‍ಪತ್ತನ್ನು ವೃದ್ಧಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಇದರ ಭಾಗವಾಗಿ ಈ ಭಾಷೆಯಲ್ಲಿ ದಶಕಗಳ ಹಿಂದೆ ಮುದ್ರಿಸಿರುವ ಪುಸ್ತಕಗಳ ಮರುಮುದ್ರಣ ಕಾರ್ಯವೂ ನಡೆಯುತ್ತಿದೆ’ ಎಂದು ಹೇಳಿದರು.

ಮಂಗಳೂರು ವಿ.ವಿಯ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಸಾಯಿಗೀತಾ ಹೆಗ್ಡೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.