ADVERTISEMENT

ಬೆಂಗಳೂರು: ಇಂದಿನಿಂದ‌ ರಾತ್ರಿ 9ರವರೆಗೆ ಮೆಟ್ರೊ ರೈಲು ಸೇವೆ 

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 10:25 IST
Last Updated 19 ಜುಲೈ 2021, 10:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲುಗಳು ಇಂದಿನಿಂದ (ಜುಲೈ 19) ರಾತ್ರಿ 9ರವರೆಗೆ ಸಂಚರಿಸಲಿವೆ.‌ ಈವರೆಗೆ ರಾತ್ರಿ 8ರವರೆಗೆ ಮಾತ್ರ ಸಾರ್ವಜನಿಕ ಸೇವೆ ಇತ್ತು.

ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ದಿನದಲ್ಲಿ 14 ತಾಸುಗಳು ಮೆಟ್ರೊ ರೈಲು ಸೇವೆ ಇರಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ದಟ್ಟಣೆ ಅವಧಿಯಲ್ಲಿ ಐದು‌ ನಿಮಿಷಕ್ಕೊಂದು, ಸಾಮಾನ್ಯ ಅವಧಿಯಲ್ಲಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಲಿವೆ ಎಂದು ನಿಗಮ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.