ಬೆಂಗಳೂರು: ಕೋರಮಂಗಲ 8ನೇ ಹಂತದಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ರೌಡಿ ಬಬ್ಲಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಲಾಗಿದೆ.
ರೌಡಿಶೀಟರ್ ಬಬ್ಲಿ ಪತ್ನಿ ಜೊತೆ ಸೋಮವಾರ ಬ್ಯಾಂಕ್‌ಗೆ ಬಂದಿದ್ದ. ಅದೇ ಸಂದರ್ಭದಲ್ಲೇ ದುಷ್ಕರ್ಮಿಗಳು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಆಡುಗೋಡಿ ಠಾಣೆ ರೌಡಿ ಪಟ್ಟಿಯಲ್ಲಿ ಬಬ್ಲಿ ಹೆಸರಿತ್ತು. ಸ್ಥಳೀಯ ರಾಜೇಂದ್ರ ಕೊಳಚೆ ಪ್ರದೇಶದಲ್ಲಿ ಕಚೇರಿ ಹೊಂದಿದ್ದ ಬಬ್ಲಿ, ಅಕ್ರಮವಾಗಿ ಮತಾಂತರದಲ್ಲಿ ತೊಡಗಿದ್ದ ಮಾಹಿತಿ ಇತ್ತು. ಎದುರಾಳಿ ತಂಡದವರು ಕೃತ್ಯ ಎಸಗಿರುವ ಮಾಹಿತಿ ಇದೆ.
ಹತ್ಯೆ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.