ADVERTISEMENT

ಬೆಂಗಳೂರು ವಿವಿ: ಪಿಎಚ್‌.ಡಿ ಅರ್ಹತಾ ಅಂಕ ಸಡಿಲ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 22:24 IST
Last Updated 22 ಜನವರಿ 2020, 22:24 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ. ಮಾಡಲು ಬಯಸಿ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ಗಳಿಸಬೇಕಾದ ಅರ್ಹತಾ ಅಂಕ ವನ್ನು ಶೇ 5ರಷ್ಟು ಅಂದರೆ ಶೇ 50 ರಿಂದ ಶೇ 45ಕ್ಕೆ ತಗ್ಗಿಸಲಾಗಿದೆ. ಇದರಿಂದಾಗಿ ಅಧಿಕ ಮಂದಿಗೆ ಪಿಎಚ್‌.ಡಿ.ಗೆ ಪ್ರವೇಶ ಪಡೆಯುವ ಅವಕಾಶ ದೊರೆತಿದೆ.

ಡಿಸೆಂಬರ್‌ 29ರಂದು ಪ್ರವೇಶ ಪರೀಕ್ಷೆ ನಡೆದಿತ್ತು. 2,058 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಅರ್ಧಕ್ಕಿಂತ ಅಧಿಕ ಮಂದಿನಿಗದಿತ ಶೇ 50ರಷ್ಟು ಅಂಕ ಗಳಿಸಲು ವಿಫಲರಾಗಿದ್ದರು. ಒಂದು ಬಾರಿಯ ಅವಕಾಶ ನೀಡುವ ನಿಟ್ಟಿನಲ್ಲಿ ಈ ಬಾರಿ ಅರ್ಹತಾ ಅಂಕದಲ್ಲಿ ಶೇ 5ರಷ್ಟು ಕಡಿತ ಮಾಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಶೇ 50ರಷ್ಟು ಸ್ನಾತಕೋತ್ತರ‍‍ಪದವಿಯಲ್ಲಿ ದೊರೆತ ಅಂಕವನ್ನು ಮತ್ತು ಶೇ 50ರಷ್ಟು ಅರ್ಹತಾ ಪರೀಕ್ಷೆಯ ಅಂಕವನ್ನು ಗಣನೆಗೆ ತೆಗೆದುಕೊಂಡು ಮೆರಿಟ್‌ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇದೀಗ ನಿಯಮದಲ್ಲಿ ಸಡಿಲಿಕೆ ಮಾಡಿದ್ದರೂ, ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಸಿಕ್ಕಿದ ತಕ್ಷಣ ಇದನ್ನು ಜಾರಿಗೆ ತರಲಾಗುವುದು, ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.