ADVERTISEMENT

‘ದಿ ಬ್ಯಾನಿಯನ್‌’ ಶಿಶು ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 19:39 IST
Last Updated 8 ಜೂನ್ 2019, 19:39 IST
ಶಿಶು ಕೇಂದ್ರವನ್ನು ಶಾಸಕ ಎಸ್‌. ಸುರೇಶ್‌ಕುಮಾರ್ ಉದ್ಘಾಟಿಸಿದರು.ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಬಿ. ಕೋರೆ, ಶಾಸಕ ವಿ. ಸೋಮಣ್ಣ, ಸಂಸದ ಪಿ.ಸಿ. ಮೋಹನ್, ಮೇಯರ್‌ ಗಂಗಾಂಬಿಕೆ, ಪ್ರಾಂಶುಪಾಲರಾದ ಉಮಾದೇವಿ ಇದ್ದರು
ಶಿಶು ಕೇಂದ್ರವನ್ನು ಶಾಸಕ ಎಸ್‌. ಸುರೇಶ್‌ಕುಮಾರ್ ಉದ್ಘಾಟಿಸಿದರು.ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಬಿ. ಕೋರೆ, ಶಾಸಕ ವಿ. ಸೋಮಣ್ಣ, ಸಂಸದ ಪಿ.ಸಿ. ಮೋಹನ್, ಮೇಯರ್‌ ಗಂಗಾಂಬಿಕೆ, ಪ್ರಾಂಶುಪಾಲರಾದ ಉಮಾದೇವಿ ಇದ್ದರು   

ಬೆಂಗಳೂರು:ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಬೇಕಿರುವ ಆಧುನಿಕ ಕಲಿಕಾ ಕೊಠಡಿಗಳನ್ನು ಒಳಗೊಂಡಿರುವ ‘ದಿ ಬ್ಯಾನಿಯನ್‌’ ಎಂಬ ಶಿಶು ಕೇಂದ್ರವನ್ನುಕೆಎಲ್‌ಇ (ಕರ್ನಾಟಕ ಲಿಂಗಾಯತ ಎಜುಕೇಷನ್‌ ಸೊಸೈಟಿ) ಶಿಕ್ಷಣ ಸಂಸ್ಥೆ ರಾಜಾಜಿನಗರದಲ್ಲಿ ಶನಿವಾರ ಆರಂಭಿಸಿದೆ.

ಮಕ್ಕಳನ್ನು ಕಲಿಕೆಗೆ ಆಕರ್ಷಿಸಲು ಕೊಠಡಿಗಳನ್ನು ಬಣ್ಣ ಬಣ್ಣದ ಚಿತ್ರಗಳಿಂದ ಸಿಂಗರಿಸಲಾಗಿದೆ.ಆಟವಾಡಲು ವಿಶಾಲ ಜಾಗ ಮತ್ತು ಈಜುಕೊಳವನ್ನು ನಿರ್ಮಿಸಲಾಗಿದೆ. ಈ ಶಿಶು ಕೇಂದ್ರವನ್ನು ಶಾಸಕ ಎಸ್. ಸುರೇಶ್‌ಕುಮಾರ್‌ ಉದ್ಘಾಟಿಸಿದರು.

‘ಮಕ್ಕಳಿಗೆ ಆರೋಗ್ಯಪೂರ್ಣ ಆಹಾರವನ್ನು ಒದಗಿಸಲಾಗುತ್ತದೆ. ಮಗುವಿನ ಸಾಮಾನ್ಯ ಕಲಿಕಾ ವಯೋಮಾನ 1 ವರ್ಷ 8 ತಿಂಗಳಿಂದ ಆರಂಭವಾಗುತ್ತದೆ. ಮಗುವಿನ ಮೂಲ ಕಲಿಕಾ ಅಡಿಪಾಯವನ್ನು ಭದ್ರಪಡಿಸಲು, ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳಲು ಬೇಕಾಗುವಮಾನಸಿಕ ಪೋಷಣೆಯನ್ನು ನೀಡಬೇಕಿದೆ. ಇದಕ್ಕೆ ಅಗತ್ಯ ಇರುವ ವಿಶೇಷತರಬೇತಿ ಪಡೆದ ಶಿಕ್ಷಕರನ್ನು ನಿಯೋಜಿಸಲಾಗಿದೆ’ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.