ADVERTISEMENT

ಬೇಡಿಕೆಗಳ ಈಡೇರಿಕೆಗೆ ಬ್ಯಾಂಕ್ ಪಿಂಚಣಿದಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:58 IST
Last Updated 28 ಮಾರ್ಚ್ 2023, 19:58 IST
   

ಬೆಂಗಳೂರು: ಆರೋಗ್ಯ ವಿಮಾ ಯೋಜನೆಯಲ್ಲಿ ದೊರೆಯುವ ಆರು ಬಗೆಯ ಗಂಭೀರ ಕಾಯಿಲೆಗಳಿಗೆ ವಿಮಾ ರಕ್ಷೆಯನ್ನು ತಮಗೂ ನೀಡಬೇಕು ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 31ರಂದು ಎಸ್‌ಬಿಐನ ಸ್ಥಳೀಯ ಪ್ರಧಾನ ಕಚೇರಿಗಳ ಮುಂಭಾಗದಲ್ಲಿ ಸೇರಲಾಗುವುದು ಎಂದು ‘ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಪೆನ್ಷನರ್ಸ್‌ ಕಮ್ಯೂನ್’ ತಿಳಿಸಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಸೌರಾಷ್ಟ್ರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂದೋರ್, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್ ಆ್ಯಂಡ್ ಜಯಪುರ, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲ ಬ್ಯಾಂಕುಗಳನ್ನು ಭಾರತೀಯ ಸ್ಟೇಟ್‌ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗಿದೆ. ನಿವೃತ್ತಿಯ ನಂತರ ಭಾರತೀಯ ಸ್ಟೇಟ್‌ ಬ್ಯಾಂಕಿನ ಉದ್ಯೋಗಿಗಳಿಗೆ ದೊರೆಯುವ ಸೌಲಭ್ಯಗಳನ್ನು ಈ ಎಲ್ಲ ಬ್ಯಾಂಕಿನ ಉದ್ಯೋಗಿಗಳಿಗೆ ವಿಸ್ತರಿಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ, ವಿಲೀನದ ನಂತರ ಎಸ್‌ಬಿಐ ತನ್ನ ಮಲತಾಯಿ ಧೋರಣೆಯಿಂದ ಸಹವರ್ತಿ ಬ್ಯಾಂಕ್‌ಗಳ ನಿವೃತ್ತರಿಗೆ ಯಾವುದೇ ಸೌಲಭ್ಯಗಳನ್ನು ವಿಸ್ತರಿಸಿಲ್ಲ ಎಂದು ಆರೋಪಿಸಿದೆ.

ಎಸ್‌ಬಿಐನಲ್ಲಿ ವಿಲೀನಗೊಂಡ ಎಲ್ಲ ಸಹವರ್ತಿ ಬ್ಯಾಂಕುಗಳನ್ನು ಸೇರಿಸಿ 2019ರಲ್ಲಿ ‘ಸ್ಟೇಟ್‌ ಬ್ಯಾಂಕ್‌ ಆಫ್‌ ನಿವೃತ್ತರ ಸಂಘ’ವನ್ನು ಸ್ಥಾಪಿಸಲಾಯಿತು. ಆದರೂ ಈ ಬ್ಯಾಂಕುಗಳ ನಿವೃತ್ತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಸ್‌ಬಿಐ ಬ್ಯಾಂಕಿನ ಆಡಳಿತ ವರ್ಗ ವಿಫಲ
ವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.