ADVERTISEMENT

ಮಹಾನ್ ಮಾನವತಾವಾದಿ ಬಸವಣ್ಣ: ಕಾಡುಗೋಡಿ ಸೊಣ್ಣಪ್ಪ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 18:09 IST
Last Updated 30 ಏಪ್ರಿಲ್ 2025, 18:09 IST
ಕರ್ನಾಟಕ ದಲಿತ ಕ್ರಿಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಕರ್ನಾಟಕ ದಲಿತ ಕ್ರಿಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಕೆ.ಆರ್.ಪುರ: ಬಸವಣ್ಣನವರು ಸರ್ವಧರ್ಮ ಜಾತಿ ಜನಾಂಗಗಳನ್ನು ಒಂದುಗೂಡಿಸಿ ಮಹಾಮಾನವತಾದಿಯಾಗಿದ್ದರು ಎಂದು ಕರ್ನಾಟಕ ದಲಿತ ಕ್ರಿಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಹೇಳಿದರು.

ಸಮೀಪದ ಕಾಡುಗೋಡಿಯ ಬಾಪೂಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪ್ರಯುಕ್ತ  ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರು ಚಳವಳಿಗಳ ಮೂಲಕ ಮಾನವ ಕುಲವೊಂದೆ ಎಂಬ ಸಂದೇಶ ಸಾರಿದರು. ಸರ್ವ ಜನಾಂಗಗಳನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು. ಜಗತ್ತಿನಲ್ಲಿ ಜಾತಿ ಬೇಧ ಇರಬಾರದು ಸರ್ವರು ಒಂದಾಗಿ ಬಾಳಬೇಕು ಎಂದು ಕನಸು ಕಂಡಿದ್ದರು ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ನರಸಿಂಹ, ಬೆಳತ್ತೂರು ವೆಂಕಟೇಶ್, ಡಾ.ಕೃಷ್ಣಮೂರ್ತಿ ಮಾದಿಗ, ಕುಮಾರ್, ಮುನಿಯಪ್ಪ, ರಮೇಶ್, ಮೂರ್ತಿ, ನಟರಾಜ್, ಫಾತಿಮಾ, ರಾಣಿ, ಉದಯಕುಮಾರ್, ಪ್ರಕಾಶ್, ಮುನಿಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.