ರಾಜರಾಜೇಶ್ವರಿನಗರ: ಬಸವಣ್ಣ ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಬಿಜೆಪಿ ಮುಖಂಡ ಮಲ್ಲತ್ತಹಳ್ಳಿ ಎಂ.ಮಂಜುನಾಥ್ ಹೇಳಿದರು.
ಮಲ್ಲತ್ತಹಳ್ಳಿಯ ಐಟಿಐ ಬಡಾವಣೆಯಲ್ಲಿ ವೀರಶೈವ ಲಿಂಗಾಯತ ಬಂಧು ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು. ದಯೆ ದೊಡ್ಡದಲ್ಲ, ಮಾನವೀಯತೆ ದೊಡ್ಡದು ಎಂಬುದನ್ನು ಮನುಕುಲಕ್ಕೆ ತೋರಿಸಿದವರು ಬಸವಣ್ಣ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಮಾನತೆ ನೀಡುವಲ್ಲಿ ಅವರ ಶ್ರಮ, ಜವಾಬ್ದಾರಿ ಬಹುದೊಡ್ಡದು ಎಂದರು.
ಮುಖಂಡರಾದ ಕುರುಬಸಪ್ಪ ಶಿವಕುಮಾರಸ್ವಾಮಿ, ಶಶಿಧರ್, ಸಂಪತ್, ರುದೇಶ್, ವರುಣ್ ನಟರಾಜ್ ಬನ್ನಿಕುಪ್ಪೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.