ADVERTISEMENT

ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 19:35 IST
Last Updated 17 ನವೆಂಬರ್ 2025, 19:35 IST
ಚೀಮಸಂದ್ರದಲ್ಲಿ ಭಕ್ತರು ಶ್ರೀಬಸವೇಶ್ವರಸ್ವಾಮಿಯ ರಥವನ್ನು ಎಳೆದರು
ಚೀಮಸಂದ್ರದಲ್ಲಿ ಭಕ್ತರು ಶ್ರೀಬಸವೇಶ್ವರಸ್ವಾಮಿಯ ರಥವನ್ನು ಎಳೆದರು   

ಕೆ.ಆರ್.ಪುರ: ಕಾರ್ತೀಕ ಮಾಸದ ಕಡೆ ಸೋಮವಾರದ ಪ್ರಯುಕ್ತ ಚೀಮಸಂದ್ರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಬಸವೇಶ್ವರಸ್ವಾಮಿಯ ರಥೋತ್ಸವವು ಅದ್ದೂರಿಯಾಗಿ ನಡೆಯಿತು.

ಉತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ಇದೇ ವೇಳೆ ಶ್ರೀವಳ್ಳಿದೇವಸೇನಾ ಶ್ರೀಸುಬ್ರಮಣ್ಯಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ಹಾಗೂ ಶ್ರೀಆಂಜನೇಯಸ್ವಾಮಿಯ ಹೂವಿನ ಪಲ್ಲಕ್ಕಿ ಮೆರವಣಿಗೆ ಜರುಗಿತು.

ADVERTISEMENT

ರಥೋತ್ಸವಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಮಹದೇವಪುರ, ಬಿ.ನಾರಾಯಣಪುರ, ಸೋಲೂರು, ಕೊಳತ್ತೂರು, ಆವಲಹಳ್ಳಿ, ಚೀಮಸಂದ್ರ ಸುತ್ತಮುತ್ತಲಿನ ಬಡಾವಣೆಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. 

‌ಮಹದೇವಪುರ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಪರಾಜ್, ಗ್ರಾಮ ಪಂಚಾಯಿಒತಿ ಸದಸ್ಯರಾದ ಸಿ. ರಾಜಣ್ಣ, ಮಂಜುನಾಥ್, ಶ್ರೀನಿವಾಸ್, ನಂಜಪ್ಪ, ಮುಖಂಡರಾದ ಸಿ.ಎಸ್ ಜಯರಾಮಯ್ಯ, ಚೇತನ್, ಅರ್ಚಕ ಚೇತನ್ ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.