ADVERTISEMENT

ಎಟಿಎಂ, ಸಂಚಾರ ಸಿಗ್ನಲ್‌ ಬ್ಯಾಟರಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:30 IST
Last Updated 9 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಟಿಎಂ ಯಂತ್ರ ಹಾಗೂ ಸಂಚಾರ ಸಿಗ್ನಲ್‌ಗಳಲ್ಲಿ ಅಳವಡಿಸುತ್ತಿದ್ದ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪದಡಿ ಮಹಮ್ಮದ್ ರಿಜ್ವಾನ್‌ನನ್ನು (28) ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ಆರೋಪಿ, ತಡರಾತ್ರಿ ಹಾಗೂ ನಸುಕಿನಲ್ಲಿ ಕೃತ್ಯ ಎಸಗುತ್ತಿದ್ದ. ಆತನಿಂದ ₹ 1 ಲಕ್ಷ ಮೌಲ್ಯದ 12 ಬ್ಯಾಟರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಟಿಎಂ ಘಟಕದೊಳಗೆ ಹೋಗುತ್ತಿದ್ದ ಆರೋಪಿ, ಯಂತ್ರವನ್ನು ಹಾಳು ಮಾಡುತ್ತಿದ್ದ. ತನ್ನ ಬಳಿಯ ಆಯುಧದಿಂದ ಬ್ಯಾಟರಿ ಹೊರಗೆ ತೆಗೆದು ಅದರ ಸಮೇತ ಪರಾರಿಯಾಗುತ್ತಿದ್ದ. ಸಂಚಾರ ದಟ್ಟಣೆ ನಿರ್ವಹಣೆಗೆ ರಸ್ತೆ ಹಾಗೂ ವೃತ್ತಗಳಲ್ಲಿ ಅಳವಡಿಸಿದ್ದ ಸಿಗ್ನಲ್‌ಗಳ ಬ್ಯಾಟರಿಗಳನ್ನೂ ಆರೋಪಿ ಕದಿಯುತ್ತಿದ್ದ. ಇದುವರೆಗೂ 12 ಬ್ಯಾಟರಿಗಳನ್ನು ಆತ ಕದ್ದಿದ್ದಾನೆ’ ಎಂದೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.