ADVERTISEMENT

ಬಿಬಿಎಂಪಿ ಕಾಯ್ದೆ– ಗೊಂದಲ ನಿವಾರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 4:09 IST
Last Updated 12 ಜನವರಿ 2021, 4:09 IST

ಬೆಂಗಳೂರು: ಬಿಬಿಎಂಪಿ ಕಾಯ್ದೆ 2020ರ ಅನುಷ್ಠಾನ ಹಾಗೂ ಕರ್ನಾಟಕ ಮುನ್ಸಿಪಲ್‌ ಕಾಯ್ದೆ 1976ರಡಿ ರೂಪಿಸಲಾದ ಬೈಲಾಗಳ ಮುಂದುವರಿಕೆ ಸಂಬಂಧ ಎದುರಾಗಿರುವ ಗೊಂದಲಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಬಿಬಿಎಂಪಿ ಕಾಯ್ದೆಯು ಸೋಮವಾರದಿಂದ ಜಾರಿಗೆ ಬಂದಿದೆ. ಈ ಕಾಯ್ದೆ ಜಾರಿಗೆ ಅಗತ್ಯವಿರುವ ನಿಯಮಗಳು, ಬೈಲಾಗಳು, ಬಿಬಿಎಂಪಿ ಹುದ್ದೆಗಳ ಪುನರ್‌ ನಾಮಕರಣ ಹಾಗೂ ವಲಯಗಳ ಪುನರ್ವಿಂಗಡಣೆ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.

ಬಿಬಿಎಂಪಿ ಕಾಯ್ದೆ ಅನುಷ್ಠಾನದ ವೇಳೆ ಎದುರಾಗಿರುವ ಗೊಂದಲಗಳ ಬಗ್ಗೆ ‘ಪ್ರಜಾವಾಣಿ’ಯು ಸೋಮವಾರದ ಸಂಚಿಕೆಯಲ್ಲಿ ಮುಖಪುಟದಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.