ADVERTISEMENT

‘ಮೂಲಸೌಕರ್ಯಕ್ಕೆ ಒತ್ತು ನೀಡಬೇಕಿತ್ತು’-ವಿನೋದ್‌ ಜೇಕಬ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:05 IST
Last Updated 5 ಏಪ್ರಿಲ್ 2022, 4:05 IST

ಬೆಂಗಳೂರು: ‘ನಗರದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಬಿಬಿಎಂಪಿ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಬೇಕಿತ್ತು. ಎಲ್ಲ ವಲಯಗಳನ್ನೂ ಕೇಂದ್ರೀಕರಿಸಿ ಬಜೆಟ್‌ ರೂಪಿಸಬೇಕಿತ್ತು’ ಎಂದುನಮ್ಮ ಬೆಂಗಳೂರು ಫೌಂಡೇಷನ್‌ನ (ಎನ್‌ಬಿಎಫ್‌) ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌ ತಿಳಿಸಿದ್ದಾರೆ.

‘ಬಜೆಟ್‌ನಲ್ಲಿ ಸುಮಾರು ₹10,480 ಕೋಟಿ ವೆಚ್ಚ ತೋರಿಸಲಾಗಿದೆ. ಇಷ್ಟೆಲ್ಲಾ ಹಣ ಖರ್ಚು ಮಾಡಿದರೂರಸ್ತೆ, ಉದ್ಯಾನ, ತ್ಯಾಜ್ಯ ನಿರ್ವಹಣೆ, ಒಳ ಚರಂಡಿ, ಪ್ರವಾಹ, ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗಿಲ್ಲ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 196ರ ಅನ್ವಯ ಮುಂದಿನ ಆರ್ಥಿಕ ವರ್ಷಾರಂಭಕ್ಕಿಂತ ಕನಿಷ್ಠ ಮೂರು ವಾರ ಮುಂಚೆಬಿಬಿಎಂಪಿ ಬಜೆಟ್‌ ಮಂಡಿಸಬೇಕು. ಆದರೆ, ಈ ಬಾರಿ ಪಾಲಿಕೆಯು ನೂತನ ಹಣಕಾಸು ವರ್ಷಕ್ಕೆ ಕೆಲವು ಗಂಟೆ ಮುಂಚಿತವಾಗಿ ಬಜೆಟ್‌ ಮಂಡಿಸಿದೆ. ಅದನ್ನು ವೆಬ್‌ಸೈಟ್‌ನಲ್ಲಷ್ಟೇ ಪ್ರಕಟಿಸಿದ್ದು ಸರಿಯಲ್ಲ‌’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.