ADVERTISEMENT

ಬಿಬಿಎಂಪಿ: ಇನ್ನೆರಡು ಕಟ್ಟಡಗಳು ಋಣಮುಕ್ತ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:39 IST
Last Updated 15 ನವೆಂಬರ್ 2018, 18:39 IST

ಬೆಂಗಳೂರು: ಹುಡ್ಕೊ ಸಾಲಕ್ಕಾಗಿ ಅಡಮಾನ ಇಟ್ಟಿದ್ದ ಇನ್ನೆರಡು ಕಟ್ಟಡಗಳನ್ನು ಬಿಬಿಎಂಪಿ ಶುಕ್ರವಾರ ಋಣಮುಕ್ತಗೊಳಿಸಲಿದೆ. ರಾಜಾಜಿನಗರದ ಮಾರುಕಟ್ಟೆ ಹಾಗೂ ಟ್ಯಾನರಿ ರಸ್ತೆಯ ಸಂಕೀರ್ಣಗಳು ಋಣಮುಕ್ತವಾಗುವ ಭಾಗ್ಯವನ್ನು ಪಡೆಯಲಿವೆ.

ಬಿಬಿಎಂಪಿಯಿಂದ ಮಾಡಲಾಗಿದ್ದ ಸಾಲಕ್ಕಾಗಿ ಒಟ್ಟಾರೆ 11 ಕಟ್ಟಡಗಳನ್ನು ಅಡಮಾನ ಇಡಲಾಗಿತ್ತು. ಈ ಹಿಂದೆ ನಾಲ್ಕು ಕಟ್ಟಡಗಳನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಲಾಗಿತ್ತು.

ಎರಡೂ ಕಟ್ಟಡಗಳ ಮೇಲಿನ ₹ 169 ಕೋಟಿ ಸಾಲದ ಹೊರೆಯನ್ನು ಬಿಬಿಎಂಪಿ ಶುಕ್ರವಾರ ಇಳಿಸಲಿದೆ. ಇದರಿಂದ ಆರು ಕಟ್ಟಡಗಳು ಋಣಮುಕ್ತ ಹೊಂದಿದಂತೆ ಆಗಲಿದೆ. ಎರಡೂ ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹುಡ್ಕೊ ಸಂಸ್ಥೆಯ ಅಧಿಕಾರಿಗಳು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಹಸ್ತಾಂತರಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.