ADVERTISEMENT

ಆಯುಕ್ತರ ಅನಿರೀಕ್ಷಿತ ಭೇಟಿ: ಪೌರಕಾರ್ಮಿಕರ ಗೈರು ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 19:52 IST
Last Updated 14 ಸೆಪ್ಟೆಂಬರ್ 2025, 19:52 IST
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಭಾನುವಾರ ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್‌ಎನ್‌ಎಲ್ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಭಾನುವಾರ ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್‌ಎನ್‌ಎಲ್ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು   

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಭಾನುವಾರ ಬೆಳಿಗ್ಗೆ ಅನಿರೀಕ್ಷಿತವಾಗಿ ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್‌ಎನ್‌ಎಲ್ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿದರು. ಸ್ವಚ್ಛತಾ ಕಾರ್ಯದಲ್ಲಿ ಇರಬೇಕಿದ್ದ ಪೌರಕಾರ್ಮಿಕರಲ್ಲಿ ಕೆಲವರು ಗೈರಾಗಿರುವುದು, ಮೇಲ್ವಿಚಾರಕರಾಗಿ ಬೇರೆಯವರು ಇರುವುದನ್ನು ಪತ್ತೆಹಚ್ಚಿದರು.

ಪಾಳಿ ಪ್ರಕಾರ ಸ್ಥಳದಲ್ಲಿ ಮೇಲ್ವಿಚಾರಕರಾಗಿ ಬಾಲಾಜಿ ಇರಬೇಕಿತ್ತು. ಆದರೆ, ಅವರ ಬದಲು ಕೆ. ಸುರೇಶ್ ಕುಮಾರ್ ಇರುವುದನ್ನು ಗಮನಿಸಿದ ಆಯುಕ್ತರು ಪೌರಕಾರ್ಮಿಕರ ಹಾಜರಾತಿಯನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. 48 ಪೌರಕಾರ್ಮಿಕರಲ್ಲಿ 15 ಜನರು ಬಂದಿಲ್ಲ ಎಂದು ಅಲ್ಲಿದ್ದ ಮೇಲ್ವಿಚಾರಕ ತಿಳಿಸಿದರು. ಆದರೆ, ಅವರು ಹಾಜರಿದ್ದವರಲ್ಲಿ 6 ಜನರ ಹೆಸರನ್ನೂ ಗೈರು ಎಂದು ಹೇಳಿದ್ದರು. ಬಾಲಾಜಿ ಮತ್ತು ಕೆ.ಸುರೇಶ್ ಕುಮಾರ್‌ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

ತಪಾಸಣೆ ವೇಳೆ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಘನತ್ಯಾಜ್ಯ ನಿರ್ವಹಣೆಯ ಎಂಜಿನಿಯರ್, ಅಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.