ADVERTISEMENT

‘ಟಿಪ್ಪು ವೃತ್ತ’ ಹೆಸರು ಕೈಬಿಟ್ಟ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:31 IST
Last Updated 28 ಜನವರಿ 2020, 19:31 IST
   

ಬೆಂಗಳೂರು: ಜಕ್ಕೂರು ವಾರ್ಡ್‌ ವ್ಯಾಪ್ತಿಯ ಬೆಳ್ಳಹಳ್ಳಿ ವೃತ್ತಕ್ಕೆ ಇಟ್ಟಿದ್ದ ‘ಬೆಳ್ಳಹಳ್ಳಿ ಟಿಪ್ಪು ಸುಲ್ತಾನ್‌ ವೃತ್ತ’ ಎಂದು ನಾಮಕರಣ ಮಾಡಿರುವ ನಿರ್ಣಯವನ್ನು ರದ್ದುಪಡಿಸಲು ಬಿಬಿಎಂಪಿ ನಿರ್ಧರಿಸಿದೆ.

ಮಂಗಳವಾರ ಕೌನ್ಸಿಲ್‌ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಈ ನಡೆಗೆ ವಿರೋಧ ಪಕ್ಷವಾದ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಪಾಲಿಕೆ ತೆಗೆದುಕೊಳ್ಳುವ ನಿರ್ಣಯಗಳ ಮಹತ್ವ ಇದರಿಂದ ಕಡಿಮೆಯಾಗಲಿದೆ. ಇದು ತುಘಲಕ್ ಸಂಸ್ಕೃತಿಯ ಪ್ರತೀಕ’ ಎಂದು ಅಬ್ದುಲ್‌ ವಾಜಿದ್‌ ಆರೋಪಿಸಿದರು.

ADVERTISEMENT

‘ಸ್ಥಳೀಯರಿಂದ ಒತ್ತಾಯದ ಮೇರೆಗೆ ಈ ನಿರ್ಣಯ ಕೈಗೊಂಡಿದ್ದೇವೆ’ ಎಂದು ಮೇಯರ್‌ ಸಮರ್ಥಿಸಿಕೊಂಡರು.

ಕಾವೇರಿಪುರ ಬಡಾವಣೆಯ ಹೆರಿಗೆ ಆಸ್ಪತ್ರೆಗೆ ಹಾಗೂ 1ನೇ ಮುಖ್ಯ ರಸ್ತೆಗೆ ದಿವಂಗತ ರಮೀಳಾ ಉಮಾಶಂಕರ್‌ ಹೆಸರಿಡಲು ಹಾಗೂ ಪದ್ಮನಾಭ ನಗರ ವಾರ್ಡ್‌ನ ಸಮೃದ್ಧಿ ಬಡಾವಣೆ ಉದ್ಯಾನಕ್ಕೆ ಪೇಜಾವರ ವಿಶ್ವೇಶ ತೀರ್ಥರ ಹೆಸರಿಡಲು ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.