ADVERTISEMENT

ಮೇಯರ್‌ ಅಭ್ಯರ್ಥಿ: ಸಪ್ತ ಆಕಾಂಕ್ಷಿಗಳಿಗೆ ಸತ್ವ ಪರೀಕ್ಷೆ

ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:49 IST
Last Updated 24 ಸೆಪ್ಟೆಂಬರ್ 2019, 19:49 IST
   

ಬೆಂಗಳೂರು: ಈಗಿನ ಪಾಲಿಕೆ ಕೌನ್ಸಿಲ್‌ನ ಕೊನೆಯ ಒಂದು ವರ್ಷದ ಅವಧಿಯ ಮೇಯರ್ ಸ್ಥಾನವು ಬಿಜೆಪಿಗೆ ಒಲಿಯುವ ಸಾಧ್ಯತೆ ಹೆಚ್ಚು ಇರುವುದರಿಂದ ಈ ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚುತ್ತಿದೆ. ತಮ್ಮನ್ನೇ ಈ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಪಾಲಿಕೆಯ ಏಳು ಸದಸ್ಯರು ಬೇಡಿಕೆ ಇಟ್ಟಿದ್ದಾರೆ.

ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿಯೇ ಬಿಜೆಪಿ ಶಾಸಕ ಎಸ್.ರಘು ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಿದೆ.

ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಚರಕನಹಳ್ಳಿ ವಾರ್ಡ್‌ನ ಸದಸ್ಯ ಪದ್ಮನಾಭ ರೆಡ್ಡಿ, ಕುಮಾರಸ್ವಾಮಿ ಬಡಾವಣೆ ವಾರ್ಡ್‌ನ ಎಲ್‌.ಶ್ರೀನಿವಾಸ್‌, ಜೋಗುಪಾಳ್ಯ ವಾರ್ಡ್‌ನ ಎಂ.ಗೌತಮ್‌ಕುಮಾರ್‌, ಗೋವಿಂದರಾಜನಗರ ವಾರ್ಡ್‌ನ ಕೆ.ಉಮೇಶ ಶೆಟ್ಟಿ, ಕಾಡುಮಲ್ಲೇಶ್ವರ ವಾರ್ಡ್‌ನ ಜಿ.ಮಂಜುನಾಥ ರಾಜು, ಕತ್ರಿಗುಪ್ಪೆ ವಾರ್ಡ್‌ನ ಎಂ.ವೆಂಕಟೇಶ್‌ (ಸಂಗಾತಿ) ಹಾಗೂ ಜಕ್ಕೂರು ವಾರ್ಡ್‌ನ ಕೆ.ಎ.ಮುನೀಂದ್ರ ಕುಮಾರ್‌ ಅವರು ಈ ಸಮಿತಿ ಮುಂದೆ ಮಂಗಳವಾರ ಮೇಯರ್‌ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.