ಬಜೆಟ್ ಪ್ರತಿಗಳೊಂದಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ಎಸ್. ಆರ್ ಉಮಾಶಂಕ, ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಕೆ,
– ಪ್ರಜಾವಾಣಿ ಚಿತ್ರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025–26ನೇ ಸಾಲಿನ ಬಜೆಟ್ ಶನಿವಾರ ಮಂಡಿಸಲಾಯಿತು.
ಚುನಾಯಿತ ಸಮಿತಿ ಇಲ್ಲದೆ ಸತತ ಐದನೇ ಬಾರಿಗೆ ಮಂಡನೆಯಾದ ಬಜೆಟ್ ಇದು.
‘ಬ್ರ್ಯಾಂಡ್ ಬೆಂಗಳೂರು’ ಕಲ್ಪನೆಯಡಿ ಮಂಡಿಸಲಾದ ಈ ಬಜೆಟ್‌ನ ಗಾತ್ರ ₹ 19,930 ಕೋಟಿ. ಈ ಬಾರಿಯ ಬಜೆಟ್ ಗಾತ್ರ ಕಳೆದ ಬಾರಿಗಿಂತ ಸುಮಾರು ಶೇ 50ರಷ್ಟು ಹೆಚ್ಚಳವಾಗಿದೆ.
2025–26ನೇ ಸಾಲಿನಿಂದ ಆಸ್ತಿ ತೆರಿಗೆ ಜೊತೆ ಘನ ತ್ಯಾಜ್ಯ ನಿರ್ವಹಣೆ ಶುಲ್ಕ ವಿಧಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ.
ಬಿಬಿಎಂಪಿಯ ವಿಶೇಷ ಆಯುಕ್ತ (ಹಣಕಾಸು) ಡಾ. ಹರೀಶ್ ಕುಮಾರ್ ಕೆ. ಅವರು ಬಜೆಟ್ ಮಂಡಿಸಿದರು. ಬಜೆಟ್‌ನ ಬಹುಪಾಲು ಭಾಗ ಸುಮಾರು ಶೇ 65ರಷ್ಟು ಪಾಲನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿಡಲಾಗಿದೆ.
ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಜೆಟ್ ಮಂಡನೆ ವೇಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.