ADVERTISEMENT

16 ತಿಂಗಳ ಬಳಿಕ ಬಿಡಿಎ ಆಡಳಿತ ಮಂಡಳಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 8:47 IST
Last Updated 17 ಜೂನ್ 2020, 8:47 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಡಳಿತ ಮಂಡಳಿಯು ಬರೋಬ್ಬರಿ 16 ತಿಂಗಳ ಬಳಿಕ ಸಭೆ ಸೇರುತ್ತಿದೆ. ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್‌ ಅಧ್ಯಕ್ಷತೆಯಲ್ಲಿ ಇದೇ 17ರಂದು (ಬುಧವಾರ ) ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ.

2019ರ ಫೆಬ್ರುವರಿ ತಿಂಗಳಲ್ಲಿ ಬಿಡಿಎ ಆಡಳಿತ ಮಂಡಳಿ ಸಭೆ ನಡೆದಿತ್ತು. ಆ ಬಳಿಕ 2020ರ ಫೆಬ್ರುವರಿಯಲ್ಲಿ ಸಭೆಗೆ ಸಮಯ ನಿಗದಿಪಡಿಸಲಾಗಿತ್ತಾದರೂ ಕಾರಣಾಂತರಗಳಿದ ಅದನ್ನು ರದ್ದುಪಡಿಸಲಾಗಿತ್ತು. ಭಾರಿ ಸಮಯದಿಂದ ಆಡಳಿತ ಮಂಡಳಿ ಸಭೆಯೇ ನಡೆಯದ ಕಾರಣ ಅನೇಕ ಪ್ರಸ್ತಾವನೆಗಳು ಮಂಜೂರಾತಿಗಾಗಿ ಕಾಯುತ್ತಿವೆ.

‘ಒಟ್ಟು 63 ಪ್ರಸ್ತಾವನೆಗಳು ಸಭೆಯ ಮುಂದೆ ಬರಲಿವೆ. ಎಲ್ಲಾ ಪ್ರಸ್ತಾವನೆಗಳೂ ಪ್ರಮುಖವಾದವುಗಳೇ ಆಗಿವೆ’ ಎಂದು ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.