ADVERTISEMENT

ಬೆಂಗಳೂರು: ನಾಗರಬಾವಿಯಲ್ಲಿ ಅನಧಿಕೃತ ಶೆಡ್‌ಗಳ ತೆರವು; ₹40 ಕೋಟಿ ಬಿಡಿಎ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 16:04 IST
Last Updated 21 ನವೆಂಬರ್ 2025, 16:04 IST
<div class="paragraphs"><p>ನಾಗರಬಾವಿ ಬಡಾವಣೆಯಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವು ಮಾಡಲಾಯಿತು.&nbsp;&nbsp;</p></div>

ನಾಗರಬಾವಿ ಬಡಾವಣೆಯಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವು ಮಾಡಲಾಯಿತು.  

   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಿದ್ದು, ನಾಗರಬಾವಿ ಬಡಾವಣೆಯಲ್ಲಿ ₹40 ಕೋಟಿ ಆಸ್ತಿ ವಶಪಡಿಸಿಕೊಂಡಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ನಾಗರಬಾವಿ ಗ್ರಾಮದ ಸರ್ವೆ ನಂ. 35ರಲ್ಲಿ 1 ಎಕರೆ ಮತ್ತು ಸರ್ವೆ ನಂ. 19 ಹಾಗೂ 138ರ 20 ಗುಂಟೆ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪ್ರದೇಶವನ್ನು ವಶಪಡಿಸಿಕೊಂಡಿತು.

ADVERTISEMENT

ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾರ್ಯಪಾಲಕ ಎಂಜಿನಿಯರ್‌ , ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.