ADVERTISEMENT

ಬಿಡಿಎ: 202 ಮೂಲೆ ನಿವೇಶನ ಇ–ಹರಾಜು

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 21:22 IST
Last Updated 18 ಜೂನ್ 2020, 21:22 IST
ಬಿಡಿಎ ಕಚೇರಿ
ಬಿಡಿಎ ಕಚೇರಿ   

ಬೆಂಗಳೂರು: ಎಚ್‌.ಎಸ್‌.ಆರ್‌ ಬಡಾವಣೆ, ಸರ್‌ ಎಂ.ವಿಶ್ವೇಶ್ವರಯ್ಯ, ಬನಶಂಕರಿ, ಎನ್‌ಜಿಇಎಫ್‌, ಜೆ.ಪಿ.ನಗರ, ರಾಜಾಜಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ 202 ಮೂಲೆ ನಿವೇಶನಗಳನ್ನು ಇ –ಹರಾಜು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.

ಇದೇ 20ರಂದು ಬೆಳಿಗ್ಗೆ 11ಕ್ಕೆ ಇ–ಹರಾಜು (ವೆಬ್‌ಸೈಟ್‌: https://eproc.karnataka.gov.in) ಪ್ರಕ್ರಿಯೆಯ ನೇರ ಬಿಡ್ಡಿಂಗ್‌ ಆರಂಭವಾಗಲಿದೆ. ಇ–ಹರಾಜಿನಲ್ಲಿ ಭಾಗವಹಿಸುವವರು ಬರುವ ಜುಲೈ 6ರಂದು ಸಂಜೆ 4 ಗಂಟೆ ಒಳಗೆ ಭದ್ರತಾ ಠೇವಣಿ ಪಾವತಿಸಬೇಕು. ಜುಲೈ 7ರಂದು ಸಂಜೆ 6 ಗಂಟೆಗೆ ಬಿಡ್ಡಿಂಗ್‌ ಕೊನೆಗೊಳ್ಳಲಿದೆ. ‘ಮೊದಲ ಹಂತದಲ್ಲಿ 202 ಮೂಲೆ ನಿವೇಶನಗಳನ್ನು ಮಾರಾಟಕ್ಕೆ ಚಾಲನೆ ನೀಡಿದ್ದೇವೆ. ಇದಕ್ಕೆ ನಾಗರಿಕರಿಂದ ಬರುವ ಪ್ರತಿಕ್ರಿಯೆ ಆಧರಿಸಿ ಹಂತ ಹಂತವಾಗಿ ಇನ್ನುಳಿದ ನಿವೇಶನಗಳನ್ನೂ ಮಾರಾಟ ಮಾಡಲಿದ್ದೇವೆ. ಮಾಹಿತಿಗೆ ಬಿಡಿಎ ವೆಬ್‌ಸೈಟ್‌ (www.bdabangalore.org) ನೋಡಬಹುದು’ ಎಂದು ಬಿಡಿಎ ಆಯುಕ್ತ ಮಹದೇವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT