ADVERTISEMENT

200 ಬಿಡಿಎ ಫ್ಲ್ಯಾಟ್ ಮಾರಾಟ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:33 IST
Last Updated 30 ಆಗಸ್ಟ್ 2025, 18:33 IST
ಫ್ಲ್ಯಾಟ್‌ ಮೇಳದಲ್ಲಿ ಮಾಹಿತಿ ಪಡೆದ ಸಾರ್ವಜನಿಕರು. 
ಫ್ಲ್ಯಾಟ್‌ ಮೇಳದಲ್ಲಿ ಮಾಹಿತಿ ಪಡೆದ ಸಾರ್ವಜನಿಕರು.    

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶನಿವಾರ ಕಣಿಮಿಣಿಕೆ ವಸತಿ ಸಮುಚ್ಚಯದಲ್ಲಿ ಆಯೋಜಿಸಿದ್ದ ಫ್ಲ್ಯಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೇಳದಲ್ಲಿ ಸುಮಾರು 750ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, 200 ಫ್ಲ್ಯಾಟ್‌ ಖರೀದಿಸಿದ್ದಾರೆ. ಪ್ರಾರಂಭಿಕ ಠೇವಣಿ ಪಾವತಿಸಿದ 115 ಮಂದಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರ ವಿತರಿಸಲಾಯಿತು. ಕಣಿಮಿಣಿಕೆಯ ಎಂಬತ್ತು 2 ಬಿ.ಎಚ್.ಕೆ., ಒಂಬತ್ತು 3 ಬಿ.ಎಚ್.ಕೆ. ಹಾಗೂ ಕೊಮ್ಮಘಟ್ಟದಲ್ಲಿ ಹದಿನಾಲ್ಕು 3 ಬಿ.ಎಚ್.ಕೆ., 4 ಎರಡು ಬಿ.ಎಚ್.ಕೆ ಮತ್ತು ಹುಣ್ಣಿಗೆರೆಯಲ್ಲಿ 8 ವಿಲ್ಲಾಗಳು ಮಾರಾಟವಾಗಿವೆ.

ಕಣಿಮಿಣಿಕೆಯಲ್ಲಿರುವ 672 ಎರಡು ಬಿ.ಎಚ್.ಕೆ ಫ್ಲ್ಯಾಟ್‌ಗಳೂ ಮಾರಾಟವಾಗಿರುವುದು ವಿಶೇಷ. ಅಲ್ಲದೇ 3 ಬಿ.ಎಚ್.ಕೆ 1,500 ಫ್ಲ್ಯಾಟ್‌ಗಳ ಪೈಕಿ 1,100 ಫ್ಲ್ಯಾಟ್‌ಗಳು ಮಾರಾಟವಾಗಿವೆ.

ADVERTISEMENT

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್‌ಗಳ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು, ಸಾಲ ಸೌಲಭ್ಯ ಒದಗಿಸಿದರು.

ಪ್ರಾಧಿಕಾರದ ಆರ್ಥಿಕ ಸದಸ್ಯ ಎ. ಲೋಕೇಶ್, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ಎಂ.ಎಸ್. ಜ್ಞಾನೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಇಂಬವಳ್ಳಿ, ಕುಮಾರ್, ಭುವನೇಶ್ವರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.