ADVERTISEMENT

ಆಸ್ತಿ ತೆರಿಗೆ ಪಾವತಿಯಲ್ಲಿ ರಿಯಾಯಿತಿ ಘೋಷಿಸಿದ ಬಿಡಿಎ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 6:20 IST
Last Updated 8 ಏಪ್ರಿಲ್ 2022, 6:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಆಸ್ತಿ ತೆರಿಗೆಯನ್ನು ಏ. 30ರ ಒಳಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ನೀಡುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಕಟಿಸಿದೆ. ಜೂನ್‌ 30ರ ನಂತರ ತೆರಿಗೆ ಪಾವತಿಸುವವರಿಗೆ ಶೇ 10ರಷ್ಟು ವಾರ್ಷಿಕ ಬಡ್ಡಿ ವಿಧಿಸಲಾಗು
ವುದು ಎಂದು ಬಿಡಿಎ ತಿಳಿಸಿದೆ.

ಆದರೆ, ಹೊಸ ಆರ್ಥಿಕ ವರ್ಷ ಆರಂಭವಾಗಿ ಒಂದು ವಾರವಾದರೂ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಬಿಡಿಎ ಇನ್ನೂ ವೆಬ್‌ಸೈಟ್‌ ಆರಂಭಿಸಿಲ್ಲ. ಇದರಿಂದ, ಆಸ್ತಿ ಮಾಲೀಕರಿಗೆ ನಿರಾಶೆಯಾಗಿದೆ.

‘ಬಿಡಿಎನ ವಿವಿಧ ವಿಭಾಗಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವೆಬ್‌ಸೈಟ್‌ ಆರಂಭಿಸದೆಯೇ ರಿಯಾಯಿತಿ ಘೋಷಿಸಿದರೆ ಏನು ಪ್ರಯೋಜನ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದ ಮಾಲೀಕರೊಬ್ಬರು ಪ್ರಶ್ನಿಸಿದ್ದಾರೆ.

ADVERTISEMENT

‘ನಾಲ್ಕು ದಿನಗಳಲ್ಲಿ ವೆಬ್‌ಸೈಟ್‌ ಸಿದ್ಧವಾಗಲಿದೆ. ಈಗಿರುವ ಆನ್‌ಲೈನ್‌ ವ್ಯವಸ್ಥೆ ಮೂಲಕ ಆಸ್ತಿ ತೆರಿಗೆ ಸ್ವೀಕರಿಸಬಹುದು. ಆದರೆ, ಆಸ್ತಿ ಮೌಲ್ಯದ ಲೆಕ್ಕಚಾರದ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಿಬ್ಬಂದಿಗಳೇ ಆಸ್ತಿ ವಿವರಗಳನ್ನು ಅಪ್‌ಲೋಡ್‌ ಮಾಡಬೇಕಾಗಿದೆ. ಇದರಿಂದಾಗಿ ವಿಳಂಬವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.