ADVERTISEMENT

ಕೆಂಗೇರಿ ಬಳಿ ₹20 ಕೋಟಿ ಮೌಲ್ಯದ ಭೂಮಿಯನ್ನು ಮರುವಶಕ್ಕೆ ಪಡೆದ ಬಿಡಿಎ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 16:23 IST
Last Updated 17 ಜುಲೈ 2025, 16:23 IST
ಬಿಡಿಎ
ಬಿಡಿಎ    

ಬೆಂಗಳೂರು: ಕೆಂಗೇರಿ ಹೋಬಳಿ ಕೆಂಚನಪುರ ಗ್ರಾಮದಲ್ಲಿ ಒತ್ತುವರಿಯಾಗಿದ್ದ ₹20 ಕೋಟಿ ಮೌಲ್ಯದ ಭೂಮಿಯನ್ನು ಬಿಡಿಎ ಮರು ವಶಕ್ಕೆ ಪಡೆದುಕೊಂಡಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿರುವ ಕೆಂಗೇರಿ ಹೋಬಳಿ, ಕೆಂಚನಪುರ ಗ್ರಾಮದ ಸರ್ವೆ ನಂ. 78/1 ಮತ್ತು 78/2 ರಲ್ಲಿ 34 ಗುಂಟೆ ಪ್ರದೇಶವನ್ನು ಪ್ರಮುಖ ಮುಖ್ಯರಸ್ತೆ (ಎಂಎಆರ್‌) ನಿರ್ಮಾಣಕ್ಕೆ ಭೂಸ್ವಾಧೀನವಾಗಿತ್ತು. ಭೀಮನಕುಪ್ಪೆ ಗ್ರಾಮದ ಸರ್ವೆ ನಂ. 98/3ರಲ್ಲಿ 30 ಗುಂಟೆ ಪ್ರದೇಶದಲ್ಲಿ  ಕೈಗಾರಿಕಾ ಶೆಡ್ ಮತ್ತು ಕಾಂಪೌಂಡ್‌ಗಳನ್ನು ನಿರ್ಮಿಸಲಾಗಿತ್ತು. ಈ ನಿರ್ಮಾಣಗಳನ್ನು ಬುಧವಾರ ತೆರವುಗೊಳಿಸಿದ ಬಿಡಿಎ ಸಿಬ್ಬಂದಿ, ಭೂಮಿಯನ್ನು ವಶಕ್ಕೆ ಪಡೆದುಕೊಂಡರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT