ADVERTISEMENT

ಬೆಳಗಾವಿ | 326 ಮಂದಿ ಮೇಲೆ ನಿಗಾ, ಸುಳ್ಳು ಸುದ್ದಿ ಹರಡಿದವರ ಮೇಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 14:28 IST
Last Updated 25 ಮಾರ್ಚ್ 2020, 14:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯಲು ಜಿಲ್ಲೆಯಲ್ಲಿ ಇದುವರೆಗೆ ವಿದೇಶದಿಂದ ಬಂದವರು‌ ಸೇರಿದಂತೆ 326 ಜನರ ಮಂದಿ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಈ ಪೈಕಿ 281 ಮಂದಿಯನ್ನು ಮನೆಗಳಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ. 7 ಮಂದಿ ಆಸ್ಪತ್ರೆಯಲ್ಲಿದ್ದಾರೆ. 33 ಮಂದಿ 14 ದಿನಗಳ ನಿಗಾ ವ್ಯವಸ್ಥೆಯನ್ನು ಪೂರ್ಣಗೊಳಿಸಿದ್ದಾರೆ. 28 ದಿನಗಳ ಐಸೋಲೇಷನ್ ಅನ್ನು ಐವರು ಮುಗಿಸಿದ್ದಾರೆ. ಈವರೆಗೆ 10 ಮಂದಿಯಿಂದ ಗಂಟಲು‌ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಐವರ ಮಾದರಿಗಳು ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಜಿಲ್ಲೆಗೆ ಸೌದಿಅರೇಬಿಯಾದಿಂದ ಬಂದವರೇ ಅತಿ ಹೆಚ್ಚಿದ್ದಾರೆ (165), ಚೀನಾದಿಂದ ಮೂವರು ಬಂದಿದ್ದಾರೆ. ನೇಪಾಳದಿಂದ 36, ಅಮೆರಿಕದಿಂದ 15 ಮಂದಿ ಜಿಲ್ಲೆಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೊನಾ ಸುಳ್ಳು ಸುದ್ದಿ: ವ್ಯಕ್ತಿ ವಿರುದ್ಧ ಪ್ರಕರಣ

'ಗೋವಾಕ್ಕೆ ದುಡಿಯಲು‌ ಹೋಗಿದ್ದ ಐವರು ಕೊರೊನಾ ವೈರಾಣು ಸೋಂಕಿಗೆ ಬಲಿಯಾಗಿದ್ದಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು‌ ಸುದ್ದಿ ಹಬ್ಬಿಸಿದ್ದ ವ್ಯಕ್ತ ವಿರುದ್ಧ ಅಥಣಿ ತಾಲ್ಲೂಕು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೌಡೇಶ ಬಿರಾದಾರ ತುಂಗಳ ಆರೋಪಿ. ವದಂತಿ ಹಬ್ಬಿಸಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದ ಆರೋಪ‌ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.