ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಮಾನವೀಯ ನಿರ್ವಹಣೆ, ದತ್ತು ಪ್ರೋತ್ಸಾಹ ಮತ್ತು ಪ್ರಾಣಿ ಕಲ್ಯಾಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸುಜಯ ಜಗದೀಶ್ ಅವರಿಗೆ 20 ಬೀದಿ ನಾಯಿಗಳನ್ನು ದತ್ತು ನೀಡಲಾಗಿದೆ ಎಂದು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.
ದತ್ತು ಕಾರ್ಯಕ್ರಮದಡಿ ನಾಯಿಗಳಿಗೆ ಸಮರ್ಪಕ ಆಹಾರ, ಆಶ್ರಯ, ವೈದ್ಯಕೀಯ ಆರೈಕೆ ಹಾಗೂ ಮಾನವೀಯ ಸಂರಕ್ಷಣೆ ನೀಡುವುದಾಗಿ ಸುಜಯ ಜಗದೀಶ್ ಅವರು ಭರವಸೆ ನೀಡಿದ್ದಾರೆ
ಉತ್ತರ ನಗರ ಪಾಲಿಕೆಯ ಪಶುಪಾಲನೆ ವಿಭಾಗದ ಮುಖ್ಯ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.
ದತ್ತು ಪಡೆಯಲು adyelahanka@gmail.com ಇಲ್ಲವೇ ಉತ್ತರ ನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿಯಲ್ಲಿ ಸಂಪರ್ಕಿಸಬಹುದು.ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಮಾನವೀಯ ನಿರ್ವಹಣೆ, ದತ್ತು ಪ್ರೋತ್ಸಾಹ ಮತ್ತು ಪ್ರಾಣಿ ಕಲ್ಯಾಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸುಜಯ ಜಗದೀಶ್ ಅವರಿಗೆ 20 ಬೀದಿ ನಾಯಿಗಳನ್ನು ದತ್ತು ನೀಡಲಾಗಿದೆ ಎಂದು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.
ದತ್ತು ಕಾರ್ಯಕ್ರಮದಡಿ ನಾಯಿಗಳಿಗೆ ಸಮರ್ಪಕ ಆಹಾರ, ಆಶ್ರಯ, ವೈದ್ಯಕೀಯ ಆರೈಕೆ ಹಾಗೂ ಮಾನವೀಯ ಸಂರಕ್ಷಣೆ ನೀಡುವುದಾಗಿ ಸುಜಯ ಜಗದೀಶ್ ಅವರು ಭರವಸೆ ನೀಡಿದ್ದಾರೆ
ಉತ್ತರ ನಗರ ಪಾಲಿಕೆಯ ಪಶುಪಾಲನೆ ವಿಭಾಗದ ಮುಖ್ಯ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.
ದತ್ತು ಪಡೆಯಲು adyelahanka@gmail.com ಇಲ್ಲವೇ ಉತ್ತರ ನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿಯಲ್ಲಿ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.