
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೆನರಾ ಬ್ಯಾಂಕ್‌ನ ವಾರ್ಷಿಕ ಮ್ಯಾರಥಾನ್‌ನಲ್ಲಿ 12 ಸಾವಿರ ಓಟಗಾರರು ಭಾಗವಹಿಸಿದರು.
3ಕೆ, 5ಕೆ ಮತ್ತು 10ಕೆ ಎಂಬ ಮೂರು ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆನರಾ ಮ್ಯಾರಥಾನ್‌ನಲ್ಲಿ 3 ವರ್ಷದ ಮಗುವಿನಿಂದ ಹಿಡಿದು 97 ವರ್ಷದ ವೃದ್ಧರವರೆಗೆ ಭಾಗವಹಿಸಿದ್ದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ. ಸತ್ಯನಾರಾಯಣ ರಾಜು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಓಟಕ್ಕೆ ಚಾಲನೆ ನೀಡಿದರು. 10 ಕೆ ಓಟದ ಪುರುಷರ ವಿಭಾಗದಲ್ಲಿ ಧರ್ಮೇಂದ್ರ ಪೂರ್ಣಿಯಾ, ಮಹಿಳೆಯರ ವಿಭಾಗದಲ್ಲಿ ಕವಿತಾ ಯಾದವ್ ಪ್ರಥಮ ಸ್ಥಾನ ಪಡೆದರು. 5 ಕೆ ಪುರುಷ, ಮಹಿಳಾ ವಿಭಾಗದಲ್ಲಿ ಕ್ರಮವಾಗಿ ಜಯೇಶ್ ಪಾಟೀಲ್ ಮತ್ತು ಚಂದಾ ಅಗ್ರ ಸ್ಥಾನವನ್ನು ಪಡೆದರು.
10 ಕೆ ವಿಭಾಗದ ವಿಜೇತರಿಗೆ ₹ 2 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹ 1 ಲಕ್ಷ, 5 ಕೆ ವಿಜೇತರಿಗೆ ₹ 1 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ ₹ 50 ಸಾವಿರ ನೀಡಿ ಗೌರವಿಸಲಾಯಿತು. ಅಲ್ಲದೇ ವಿವಿಧ ಸ್ಥಾನಗಳನ್ನು ಪಡೆದವರಿಗೆ ಬಹುಮಾನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.